ಬಂಟ್ವಾಳ(ಜ.೧೪, ಕುಲಾಲ್ ವರ್ಲ್ಡ್ ನ್ಯೂಸ್): ಫೆಬ್ರವರಿ 4ರಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ಕುಂಬಾರರ ಬೃಹತ್ ಸಮಾವೇಶ ಮತ್ತು ಹಕ್ಕೊತ್ತಾಯ ಸಭೆಯ ಆಮಂತ್ರಣ ಪತ್ರಿಕೆಯನ್ನು ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರು ತಮ್ಮ ದಿವ್ಯ ಹಸ್ತದಿಂದ ಬಿಡುಗಡೆ ಜ. ೧೪ರಂದು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳ್ತಂಗಡಿಯಲ್ಲಿ ನಡೆಯುವ ಸಮಾವೇಶ ಮತ್ತು ಹಕ್ಕೊತ್ತಾಯ ಸಭೆಯು ಕುಲಾಲ ಕುಂಬಾರರ ಒಗ್ಗಟ್ಟು ಪ್ರದರ್ಶನದ ಮೂಲಕ ರಾಜಕೀಯ ನಾಯಕರ ಕಣ್ಣು ತೆರೆಸುವುದರೊಂದಿಗೆ, ಸಮಾವೇಶವು ಅದ್ಭುತ ರೀತಿಯಲ್ಲಿ ಯಶಸ್ವಿಯಾಗಿ ನಡೆಯಲಿ. ಈ ಮೂಲಕ ಸಮಾಜವು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳೊಂದಿಗೆ ಸಮಾಜದಲ್ಲಿ ಉನ್ನತಿಯನ್ನು ಪಡೆಯುವಂತಾಗಲಿ ಎಂದು ಆಶಿಸಿದರು. ಬಳಿಕ ಸಮಾವೇಶದ ಯಶಸ್ಸಿಗಾಗಿ ಪದಾಧಿಕಾರಿಗಳ ಸಮ್ಮುಖದಲ್ಲಿ ಶ್ರೀ ಮಹಾಲಕ್ಷ್ಮೀ ದೇವರಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಈ ಸಂದರ್ಭ ಸಮಾವೇಶ ಅಧ್ಯಕ್ಷರು ಸಮಾವೇಶ ಮತ್ತು ಹಕ್ಕೊತ್ತಾಯ ಸಮಿತಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ, ಹೆಚ್ ಪದ್ಮ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ, ಬಿ.ಎಸ್. ಕುಲಾಲ್, ಪ್ರಧಾನ ವರದಿಗಾರರು ಸುದ್ದಿ ಬಿಡುಗಡೆ, ಲೋಕೇಶ್ ಕುಲಾಲ್, ಅಧ್ಯಕ್ಷರು ಯುವ ವೇದಿಕೆ ಬೆಳ್ತಂಗಡಿ, ಪುಷ್ಪರಾಜ್ ಕುಲಾಲ್ ಪ್ರಧಾನ ಕಾರ್ಯದರ್ಶಿ ಸಮಾವೇಶ ಮತ್ತು ಹಕ್ಕೊತ್ತಾಯ ಸಮಿತಿ., ಉಮೇಶ್ ಕುಲಾಲ್, ಕಾರ್ಯಧ್ಯಕ್ಷರು ಸಮಾವೇಶ ಮತ್ತು ಹಕ್ಕೊತ್ತಾಯ ಸಮಿತಿ, ಅಶೋಕ್ ಕುಲಾಲ್, ಕಾರ್ಯದರ್ಶಿ ಸಮಾವೇಶ ಮತ್ತು ಹಕ್ಕೊತ್ತಾಯ ಸಮಿತಿ ಉಪಸ್ಥಿತರಿದ್ದರು.
ಕುಲಾಲ ಕುಂಬಾರ ಸಮುದಾಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 20 ಸಾವಿರಕ್ಕೂ ಅಧಿಕ ಸಮುದಾಯದ ಸದಸ್ಯರ ಸಮ್ಮುಖದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕುಲಾಲ ಕುಂಬಾರರ ಸಮಾವೇಶ ಮತ್ತು ಹಕ್ಕೊತ್ತಾಯ ಸಭೆಯು ಕರಾವಳಿ ಜಿಲ್ಲೆಗಳ ಎಲ್ಲಾ ಕುಲಾಲ-ಕುಂಬಾರ ಸಂಘ-ಸಂಸ್ಥೆ ,ಮಠ -ಮಂದಿರ ಹಾಗು ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ ಹಾಗು ಕರಾವಳಿ ಕುಲಾಲ-ಕುಂಬಾರ ಯುವ ವೇದಿಕೆಯ ಸಹಕಾರದೊಂದಿಗೆ, ಬೆಳ್ತಂಗಡಿ ತಾಲೂಕು ಕುಲಾಲ ಕುಂಬಾರ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.