ಮಧುಮೇಹ ನಿಯಂತ್ರಣಕ್ಕೊಂದು ಇನ್ಸುಲಿನ್ ಗಿಡ !
ಬಂಟ್ವಾಳ(ಡಿ.೩೧, ಕುಲಾಲ್ ವರ್ಲ್ಡ್ ನ್ಯೂಸ್) : ಔಷಧಿಗಳ ಅನ್ವೇಷಣೆ ನಡೆದಂತೆ ಹೊಸದಾಗಿ ಹುಟ್ಟುವ ರೋಗಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಇಂಗ್ಲೀಷ್ ಮತ್ತು ಹೋಮಿಯೋಪತಿಯಲ್ಲಿ ವಾಸಿಯಾಗದ ರೋಗಗಳನ್ನು ಆಯುರ್ವೇದ ವಾಸಿ ಮಾಡುತ್ತಿದ್ದು, ಇತ್ತೀಚೆಗಿನ ಮಹಾಮಾರಿಗಳೆಲ್ಲ ಇದರೆದುರು ಸೋಲುತ್ತಿವೆ. ಈ ಆಯುರ್ವೇದದ ಮೂಲ ಇರುವುದೇ ನಮ್ಮ ಸುತ್ತಮುತ್ತಲಿರುವ ಹಸಿರು ಗಿಡಗಳಲ್ಲಿ. ಇಂತಹ ಒಂದೆರಡು ಅಮೂಲ್ಯವಾದ ಗಿಡಗಳು ಇಲ್ಲಿನ ಉಳಿ ಗ್ರಾಮದ ಹೂರಿಂಜ ಎಂಬಲ್ಲಿ ಲಭ್ಯವಿದ್ದು ಎಲ್ಲೆಡೆ ಸುದ್ದಿ ಮಾಡುತ್ತಿದೆ.
ಮಧುಮೇಹದಿಂದ ಬಳಲುತ್ತಿರುವವರು ಅದನ್ನು ನಿಯಂತ್ರಿಸಲು ಇನ್ಸುಲಿನ್ ಬಳಸುವುದು ಸಾಮಾನ್ಯ. ಇಂತಹ ಇನ್ಸುಲಿನ್ ನಂತೆ ಬಳಸಬಹುದಾದ ಗಿಡವೊಂದು ಇಲ್ಲಿದೆ. ವರ್ಷಗಳ ಹಿಂದೆ ಉಪ್ಪಿನಂಗಡಿಯಿಂದ ತಂದು ಸೇಸಪ್ಪ ಮೂಲ್ಯ ಅವರು ಬೆಳೆಸಿದ ಈ ಗಿಡವೀಗ ಸುತ್ತಮುತ್ತಲಿನ ಮಧುಮೇಹಿಗಳ ಪಾಲಿಗೆ ಬದುಕಿನ ಆಶಾಕಿರಣವಾಗಿ ಕಾಣಿಸುತ್ತಿದೆ. ಇನ್ಸುಲಿನ್ ಬದಲಿಗೆ ಈ ಗಿಡವನ್ನೇ ಬಳಸಬಹುದು ಎನ್ನುವುದು ಈಗಾಗಲೇ ಸಾಬೀತಾಗಿದೆ.
ಇನ್ನು ಕೆಂಪು ಸಂಜೀವಿನಿ ಎಂದು ಹೆಸರಾದ `ಕರಿಯನೆಕ್ಕಿ’ ಎಂದು ತುಳು ಭಾಷಿಕರಿಂದ ಕರೆಯಲ್ಪಡುವ ಗಿಡಗಳೂ ಇಲ್ಲಿದ್ದು, ಈಗಾಗಲೇ ಕ್ಯಾನ್ಸರಿನಂತಹ ಮಹಾಮಾರಿಗಳಿಗೆ ಔಷಧಿಯಾಗಿ ಮತ್ತು ರೋಗ ನಿಯಂತ್ರಕವಾಗಿ ಬಳಕೆಯಾಗುತ್ತಿದೆ. ಅಲ್ಲದೇ ಮನುಕುಲದ ಶಾಪವೆನ್ನಿಸಿದ ಏಡ್ಸ್ ರೋಗಕ್ಕೂ ಈ ಗಿಡ ಮದ್ದಾಗಿ ಉಪಯೋಗಿಸಬಹುದೇ ಎಂದು ಪ್ರಯೋಗಗಳು ನಡೆಯುತ್ತಿದ್ದು, ತಜ್ಞರ ತಂಡ ಇತ್ತೀಚೆಗೆ ಇಲ್ಲಿಗೆ ಭೇಟಿ ಕೊಟ್ಟಿತ್ತು. ಚಿಕೂನ್ ಗುನ್ಯಾದಿಂದ ಬಳಲುತ್ತಿರುವವರಿಗೆ ಬೇಕಾದ ಅಮೃತಬಳ್ಳಿ ಮುಂತಾದ ಹಲವಾರು ಔಷಧಿಬಳ್ಳಿ, ಗಿಡಗಳು ಹೂರಿಂಜದ ಸೇಸಪ್ಪ ಮೂಲ್ಯರ ಸಂಗ್ರಹದಲ್ಲಿದ್ದು, ಈ ಗಿಡಗಳಿಗಾಗಿ ಅವರನ್ನು 96116 48961 ಹಾಗೂ 94820 47214 ನಂಬರ್ ನಲ್ಲಿ ಸಂಪರ್ಕಿಸಬಹುದಾಗಿದೆ.