ಕಾಪು(ಡಿ.೧೫, ಕುಲಾಲ್ ವರ್ಲ್ಡ್ ನ್ಯೂಸ್): ಶಿರ್ವ ಹಿಂದೂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಶ್ಮಿತಾ ಕುಲಾಲ್ ಅವರು ತ್ರೋ ಬಾಲ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರು ರಾಮನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಆಯ್ಕೆ ನಡೆದಿದೆ. ಈ ಮೂಲಕ ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ. ರಶ್ಮಿತಾ ಕುಲಾಲ್ ಅವರು ಕಾಪು ಸಮೀಪದ ಕುತ್ಯಾರು ಗ್ರಾಮದ ದಾರೊಂಟು ರಾಘು ಕುಲಾಲ್ ಹಾಗೂ ಅಮಿತ ಕುಲಾಲ್ ದಂಪತಿಯ ಸುಪುತ್ರಿ .
ತ್ರೋಬಾಲ್ ಸ್ಪರ್ಧೆಯಲ್ಲಿ ರಶ್ಮಿತಾ ಕುಲಾಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ
Students corner
1 Min Read


