ಕಾರ್ಕಳ(ಡಿ.೧೫,ಕುಲಾಲ್ ವರ್ಲ್ಡ್ ನ್ಯೂಸ್): ಇಲ್ಲಿನ ಕುಲಾಲ ಸುಧಾರಕ ಸಂಘವು ಯಶಸ್ವಿ ಇಪ್ಪತ್ತನೇ ವರುಷಕ್ಕೆ ಕಾಲಿಡುತ್ತಿರುವ ಸುಸಂದರ್ಭದಲ್ಲಿ 2017 ನೇ ಏಪ್ರಿಲ್ 30 ರಂದು ಅತಿ ವಿಜೃಂಭಣೆಯಿಂದ ಸಮಸ್ತ ಕುಲಾಲ ಬಾಂಧವರ ಮತ್ತು ಊರ ಪರವೂರ ಮಹಾದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ಕುಲಾಲ ಸಭಾ ಭವನವು ಗಣ್ಯಾತಿಗಣ್ಯರ ಅಮೃತ ಹಸ್ತದಿಂದ ಉದ್ಘಾಟಿನೆಗೊಂಡು ಸಮಾಜಕ್ಕೆ ಅರ್ಪಿತವಾಗಿರುವುದು ಸಮಸ್ತ ಕುಲಾಲ ಸಮುದಾಯಕ್ಕೇ ಹೆಮ್ಮೆಯ ಸಂಗತಿ. ಆದರೆ ಈ ಕುಲಾಲ ಸಭಾಭವನದ ನಿರ್ಮಾಣ ಕಾರ್ಯ ಒಂದು ದಿನ ಅಥವಾ ಒಂದು ತಿಂಗಳಿನಿಂದ ಯೋಜನೆಯಲ್ಲ. ದಶಕವೊಂದರ ರೂಪು ರೇಷೆ, ಧೃಡ ಸಂಕಲ್ಪ, ಸಮಾಜ ಬಾಂಧವರ ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಸಂಘದ ಕಾರ್ಯಕಾರಿ ಮಂಡಳಿಯ ನಿರಂತರ ಹೋರಾಟ ಪ್ರಯತ್ನವೂ ಸೇರಿ ಕುಲಾಲ ಸಭಾಭವನದ ಕನಸಿಗೊಂದು ಮೂರ್ತ ರೂಪ ಸಿಕ್ಕಿದ್ದು. ಮನುಷ್ಯನ ಪ್ರಯತ್ನದೊಂದಿಗೆ ದೈವ ಬಲವು ಅವಶ್ಯ ಅನ್ನುದಕ್ಕೇ ಪುಷ್ಠಿ ನೀಡುವಂತಹ ಘಟನೆಯೆಂದರೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಮಗೆದುರಾದ ಹಲವಾರು ಅಡತಡೆಗಳು. ಪರಿಹಾರಾರ್ಥವಾಗಿ ಗ್ರಾಮ ದೇವರಾದ ಕುಕ್ಕುಂದೂರು ದುರ್ಗಾಪರಮೇಶ್ವರಿ ಅಮ್ಮನವರ ಸಾನ್ನಿಧ್ಯದಲ್ಲಿ ದುರ್ಗಾ ನಮಸ್ಕಾರ ಪೂಜೆ ಮತ್ತು ಮಂದಾರ್ತಿ ದುರ್ಗಾ ಪರಮೇಶ್ವರಿ ಅಮ್ಮನವರ ಕ್ಷೇತ್ರಕ್ಕೆ ಪಾದಯಾತ್ರೆಯ ಸಂಕಲ್ಪ ಮಾಡಿದ ತರುವಾಯ ನಿರಾಂತಕವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಯಶಸ್ವಿಯಾಗಿದ್ದು ಸದಸ್ಯ ಬಾಂಧವರಿಗೆ ಅರಿವಿರುವ ವಿಚಾರ.
ಈ ಹಿಂದೆ ದುರ್ಗಾ ನಮಸ್ಕಾರ ಸೇವೆಯು ಸಂಘದ ಉಪಸ್ಥಿತ ಸದಸ್ಯರ ಸಹಕಾರದಿಂದ ನೆರವೇರಿದ್ದು ಈಗ ಪಾದಯಾತ್ರೆಯ ಸುಯೋಗವು ಕೂಡಿ ಬಂದಿದೆ. ಇದೇ ಬರುವ 17/ 12/ 2017 ನೇ ಭಾನುವಾರ ಅಪರಾಹ್ನ 3 ಗಂಟೆಗೆ ಕಾರ್ಕಳ ಜೋಡುರಸ್ತೆಯ ಕುಲಾಲ ಸಂಘದಿಂದ ಹೊರಡುವ ಪಾದಯಾತ್ರೆಯು ರಾತ್ರಿ ಪೆರ್ಡೂರು ಕುಲಾಲ ಸಂಘದ ಆಶ್ರಯದಲ್ಲಿ ವಿಶ್ರಾಂತಿ ಪಡೆದು ಸೋಮವಾರ ಮುಂಜಾನೆ ಮಂದಾರ್ತಿ ಕ್ಷೇತ್ರದಲ್ಲಿ ಅಮ್ಮನವರ ದರುಶನ ಪಡೆದು ವಿಶೇಷ ಸೇವೆ ಸಲ್ಲಿಸಲಿದೆ.
ಸಂಘದ ಸದಸ್ಯ ಬಾಂಧವರು, ಕಾರ್ಯಕಾರಿ ಮಂಡಳಿ, ಮಹಿಳಾ ಘಟಕ ಮತ್ತು ಸಮಸ್ತ ಕುಲಾಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಂದಾರ್ತಿಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಕುಲಾಲ ಸಂಘದ ಮುಖಂಡರು ವಿನಂತಿಸಿದ್ದಾರೆ.
ಡಿ.17ರಂದು ಕಾರ್ಕಳ ಕುಲಾಲ ಸಂಘ ವತಿಯಿಂದ ಮಂದಾರ್ತಿ ದೇವಸ್ಥಾನಕ್ಕೆ ಪಾದಯಾತ್ರೆ
Kulal news
1 Min Read