ಉಡುಪಿ(ನ.೨೧, ಕುಲಾಲ್ ವರ್ಲ್ಡ್ ನ್ಯೂಸ್) : `ಸಮಾಜ ಬಾಂಧವರನ್ನು ಒಗ್ಗೂಡಿಸಿ ಇತರ ಸಂಘಟನೆಗಳ ಉತ್ತಮ ತತ್ವಗಳನ್ನು ಸೇರಿಸಿಕೊಂಡು ದೇಶ ಸೇವಯಲ್ಲಿ ಸಮರ್ಪಿಸಿಕೊಳ್ಳವುದೇ ಕುಲಾಲ ಸಮಾಜ ಸುಧಾರಕ ಸಂಘದ ಉದ್ದೇಶ’ ಎಂದು ಕುಂದಾಪುರ ಮಂಜುನಾಥ ಆಸ್ಪತ್ರೆ ಮುಖ್ಯಸ್ಥ ಕುಲಾಲರತ್ನ ಡಾ ಎಂ.ವಿ.ಕುಲಾಲ ಹೇಳಿದರು.
ಬಿದ್ಕಲ್ ಕಟ್ಟೆಯ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ ಆಶ್ರಯದಲ್ಲಿ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಕುಂದಾಪುರ ಬೈಂದೂರು ಸಾರಥ್ಯದಲ್ಲಿ ಕ್ಷೇತ್ರ ಕುಲಾಲ ಸಮಾಜ ಬಾಂಧವರ ೨೦೧೭ ಸರ್ವಜ್ಞ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.
ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ನಿರಂಜನ ಎಂ ಅಸೋಡು ಅಧ್ಯಕ್ಷತೆ ವಹಿಸಿದ್ದರು ಕಾಲೇಜು ಉಪಪ್ರಾಂಶುಪಾಲ ಕರುಣಾಕರ ಶೆಟ್ಟಿ ಮೊಗೆಬೆಟ್ಟು , ಚಂದ್ರಹಾಂಡ ಮೊಳಹಳ್ಳಿ , ಮೊಳಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಉದಯ ಕುಲಾಲ , ಮಡಾಮಕ್ಕಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜು ಕುಲಾಲ , ರಾಘವೇಂದ್ರ ಕುಲಾಲ ಹೆಮ್ಮಾಡಿ , ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಲಾಲ ನಡೂರು, ಬೈಂದೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮಂಜುನಾಥ ಕುಲಾಲ ಜನ್ಸಾಲೆ ,ಕುಂದಾಪುರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹರೀಶ್ ಕುಲಾಲ್ ಕೆದೂರು , ನಾಗೇಶ ಕುಲಾಲ ಜನ್ಸಾಲೆ ಹೆಂಗವಳ್ಳಿ ಘಟಕದ ಅಧ್ಯಕ್ಷ ಗೋವಿಂದ ಕುಲಾಲ ,ವಕ್ವಾಡಿ ಘಟಕದ ಅಧ್ಯಕ್ಷ ರಾಜು ಕುಲಾಲ ಮೊದಲಾದವರು ಉಪಸ್ಥಿತರಿದ್ದರು
ಕ್ರೀಡೋತ್ಸವ ಸಮಿತಿ ಅಧ್ಯಕ್ಷ ಹಾಗೂ ಬೈಂದೂರು ವಲಯ ಅರಣ್ಯಾಧಿಕಾರಿ ಫ್ರಭಾಕರ ಕುಲಾಲ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು ಹರೀಶ ಕುಲಾಲ ಕೆದೂರು ಸ್ವಾಗತಿಸಿ ಸಂತೋ಼ಷ ಕುಲಾಲ ವಕ್ವಾಡಿ ನಿರೂಪಿಸಿದರು .ಮಂಜುನಾಥ ಕುಲಾಲ ವಂದಿಸಿದರು.