ಬಂಟ್ವಾಳ (ನ.೦೪, ಕುಲಾಲ್ ವರ್ಲ್ಡ್ ನ್ಯೂಸ್) : ನಮ್ಮ ಸಮಾಜವು ವಿಶಿಷ್ಟವಾಗಿ ಬೆಳೆಯಬೇಕು. ಸಾಧನೆ ಮಾಡುವವರನ್ನು ನಾವು ಗುರುತಿಸಬೇಕು. ಹಾಗೆ ಗುರುತಿಸಿದಾಗ ಅವರ ಸಾಧನೆಯು ಇನ್ನಷ್ಟು ಮಂದಿಗೆ ಸ್ಪೂರ್ತಿಯಾಗುತ್ತದೆ ಎಂದು ಕಾರ್ಪೊರೇಶನ್ ಬ್ಯಾಂಕ್ ನಿವೃತ್ತ ಡಿ.ಜಿ.ಎಂ. ಬಿ. ಮೋಹನದಾಸ ಹೇಳಿದರು.
ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಪರಿಶ್ರಮದಿಂದ ಇನ್ನಷ್ಟು ಸಾಧನೆ ಮಾಡಲಿ ಎಂದರು. ಎಂ.ಆರ್.ಪಿ.ಎಲ್. ವಿತ್ತಾಧಿಕಾರಿ ಜಯೇಶ್ಗೋವಿಂದ ಮಾತನಾಡಿ ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಕುಲಾಲ ಸಂಘದ ಅಧ್ಯಕ್ಷ ಬಿ. ಸತೀಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾ ಪುರಸ್ಕಾರದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಬಾಗದಲ್ಲಿ ಪ್ರಥಮ ಸುಶ್ಮಿತಾ ಕುಲಾಲ್ ನಾವೂರು, ದ್ವಿತೀಯ ಶುಭಶ್ರೀ ಕಂದೂರು ಸಜಿಪಮೂಡ, ದೀಕ್ಷಾ ಕೊೈಲ, ತೃತೀಯ ರಮ್ಯಾ ಮೂಡನಡುಗೋಡು, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಅಪೂರ್ವ ಬಿ.ಸಿ.ರೋಡು, ದ್ವಿತೀಯ ಧನ್ರಾಜ್ ಕುಲಾಲ್ ಕರೆಂಕಿ, ತೃತೀಯ ಲಿಖಿತಾ ನರಿಕೊಂಬು, ಕಲಾ ವಿಭಾಗದಲ್ಲಿ ಪ್ರಥಮ ವಾಣಿಶ್ರೀ, ದ್ವಿತೀಯ ಚೈತನ್ಯ, ತೃತೀಯ ಕವಿತಾ ವೈ ಹಾಗೂ ಎಸ್ಎಸ್ಎಲ್ಸಿಯಲ್ಲಿ 625 ರಲ್ಲಿ 622 ಅಂಕ ಗಳಿಸಿದ ಪ್ರಥಮ ಶ್ರೇಯಾ ದಾಸಬೈಲು, ದ್ವಿತೀಯ ರಕ್ಷಿತಾ ಮೂಲ್ಯ ಪಲ್ಲತ್ತಿಲ ಮಾಣಿ, ತೃತೀಯ ಸ್ಮರಣ್ ಬಿ.ಎಲ್. ಪೊಸಳ್ಳಿ ಬಿ.ಸಿ.ರೋಡು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಶೇ. 90ಕ್ಕಿಂತ ಅತ್ಯಧಿಕ ಅಂಕಗಳನ್ನು ಗಳಿಸಿದ 16 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 25 ವಿದ್ಯಾರ್ಥಿಗಳಿಗೆ ನಿರಂತರ ವಿದ್ಯಾರ್ಥಿ ವೇತನ ನೀಡಲಾಯಿತು. ಕುರಿಯಾಳದ ಕೇಶವ ಬಂಗೇರ ಮತ್ತು ರಾಜೀವಿ ದಂಪತಿಗಳ ಮಗಳು ಭಾಗ್ಯಶ್ರೀ ವಿಕಲ ಚೇತನಳಾಗಿದ್ದು ವಿಶೇಷ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಚದುರಂಗದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ 9ನೇ ತರಗತಿ ವಿದ್ಯಾರ್ಥಿನಿ ಯಶಸ್ವಿ ಅವರನ್ನು ಅಭಿನಂದಿಸಲಾಯಿತು.
ಉಪಾದ್ಯಕ್ಷ ಡಿ.ಎಂ. ಕುಲಾಲ್ ಸ್ವಾಗತಿಸಿ, ಮೀನಾಕ್ಷಿ ಪ್ರಾರ್ಥಿಸಿದರು. ಯೋಗೀಶ್ ಬಂಗೇರ ವಂದಿಸಿದರು. ಕವಿತಾ ಯಾದವ್ ಕಾರ್ಯಕ್ರಮ ನಿರೂಪಿಸಿದರು.