ಕಿನ್ನಿಗೋಳಿ(ನ.೦೨, ಕುಲಾಲ್ ವರ್ಲ್ಡ್ ನ್ಯೂಸ್): ಕರ್ನಾಟಕ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ನಡೆಸಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧಾ ಕೂಟದಲ್ಲಿ ಕಿನ್ನಿಗೋಳಿಯ ಶೃತಿ ಕುಲಾಲ್ ಅವರು ಚಿನ್ನದ ಪದಕ ಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕಿನ್ನಿಗೋಳಿಯ ಮಾರ್ಗನ್ ವಿಲಿಯಂ ಅವರ ಬಳಿ ಕರಾಟೆ ತರಬೇತಿ ಪಡೆಯುತ್ತಿರುವ ಶೃತಿ ಅವರು ಐಕಳ ಪೊಂಪೈ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ. ಈಕೆ ಕಿನ್ನಿಗೋಳಿ ಜೋಡುಬೈಲು ಗೀತಾ ಮತ್ತು ಗೋಪಾಲ್ ಕುಲಾಲ್ ದಂಪತಿಯ ಸುಪುತ್ರಿ.
ಶೃತಿ ಕುಲಾಲ್ ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
Students corner
1 Min Read


