ನವದೆಹಲಿ(ಅ.೧೭, ಕುಲಾಲ್ ವರ್ಲ್ಡ್ ನ್ಯೂಸ್): ಈ ಬಾರಿ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ದೀಪಾವಳಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲು ಉತ್ತರಪ್ರದೇಶದ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆ ಬಳಿಯ ಸರಯೂ ನದಿಯ ದಂಡೆಯಲ್ಲಿ ಅಕ್ಟೊಬರ್ ೧೮ರಂದು ಎರಡು ಲಕ್ಷ ಹಣತೆ ಬೆಳಗಿಸಿ ಗಿನ್ನೆಸ್ ದಾಖಲೆ ನಿರ್ಮಿಸಲು ತೀರ್ಮಾನಿಸಲಾಗಿದೆ.
ಇಷ್ಟು ಪ್ರಮಾಣದ ಹಣತೆಯನ್ನು ತಯಾರಿಕೆಯ ಜವಾಬ್ದಾರಿಯನ್ನು ಕುಂಬಾರರ ಗ್ರಾಮವಾದ ಜೈಸಿಂಗ್ ಪುರದ 60 ಕುಂಬಾರ ಕುಟುಂಬಗಳಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಕುಂಬಾರ ಕುಟುಂಬಗಳು ಹಣತೆ ತಯಾರಿಯಲ್ಲಿ ಫುಲ್ ಬ್ಯುಸಿಯಾಗಿದೆ. ಯೋಗಿ ಆದಿತ್ಯನಾಥ್ ಭಾಗವಹಿಸಲಿರುವ ಈ ದೀಪಾವಳಿ ಆಚರಣೆಯಲ್ಲೂ ಭಾಗವಹಿಸಲು ಕುಂಬಾರರಿಗೆ ಆಹ್ವಾನ ನೀಡಲಾಗಿದ್ದು, ಈ ಕುಟುಂಬಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಇದುವರೆಗೆ ಅತಿ ಹೆಚ್ಚು ಹಣತೆ ಬೆಳಗಿದ ಗಿನ್ನೆಸ್ ದಾಖಲೆಯು ಜೈಲು ಪಾಲಾಗಿರುವ ರಾಮ್ ರಹೀಮ್ ಬಾಬಾನ ಡೇರಾ ಸಚ್ಚಾ ಸೌದಾ ಹೆಸರಿನಲ್ಲಿದ್ದು, ಅಂದು 1,50,009 ಹಣತೆ ಬೆಳಗಿಸಲಾಗಿತ್ತು. ಅದನ್ನು ಮುರಿಯಲು ಇದೀಗ ಉತ್ತರಪ್ರದೇಶ ಸಜ್ಜಾಗಿದೆ.