ಮಂಗಳೂರು(ಅ.೦೯, ಕುಲಾಲ್ ವರ್ಲ್ಡ್ ನ್ಯೂಸ್): ಬಡ ಕೂಲಿ ಕಾರ್ಮಿಕರಾಗಿರುವ ಎಕ್ಕಾರು ವಿಶ್ವನಾಥ್ ಕುಲಾಲ್ ಅವರ ಮಗಳ ವಿದ್ಯಾಭ್ಯಾಸಕ್ಕೆ `ಬಿರುವೆರ್ ಕುಡ್ಲ’ ಬಜಪೆ ಘಟಕ ದ ವತಿಯಿಂದ ಸಹಾಯ ಹಸ್ತ ನೀಡಿದ್ದಾರೆ.
ನಿಡ್ಡೋಡಿ ಶ್ರೀ ದುರ್ಗಾ ದೇವಿ ಐಟಿಐ ಯಲ್ಲಿ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ವಿಭಾಗದಲ್ಲಿ ಶೋಭಿತಾ ಕುಲಾಲ್ ವ್ಯಾಸಂಗ ಮಾಡುತ್ತಿದ್ದು, ಈಕೆಯ ತಂದೆ ವಿಶ್ವನಾಥ್ ತುಂಬ ಕಷ್ಟದಲ್ಲಿ ಸಾಲ ಮಾಡಿ ಕಾಲೇಜಿನ ಶುಲ್ಕವನ್ನು ಕಟ್ಟಿದ್ದರು. ಶೋಭಿತಾ ಪ್ರಥಮ ವರ್ಷದ ಶಿಕ್ಷಣವನ್ನು ಪೂರೈಸಿ ಎರಡನೇ ವರ್ಷದ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದೇ ಕಾಲೇಜು ಬಿಡಿಸುವ ನಿರ್ಧಾರ ಮಾಡಿದ್ದರು.
ಇದನ್ನು ಗಮನಿಸಿದ ಕಾಲೇಜಿನ ಪ್ರಾಂಶುಪಾಲರಾದ ಅನುರಾಧ ಸಾಲ್ಯಾನ್ ರವರು ಬಿರುವೆರ್ ಕುಡ್ಲ ಬಜಪೆ ಘಟಕವನ್ನು ಸಂಪರ್ಕಿಸಿ ಸಹಾಯಹಸ್ತವನ್ನು ನೀಡಲು ಕೋರಿದ್ದರು. ವಿಶ್ವನಾಥ್ ಕುಲಾಲ್ ಕುಟುಂಬದ ಕಷ್ಟವನ್ನು ಗಮನಿಸಿದ ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ ಸದಸ್ಯರು ಸಹಾಯ ಹಸ್ತವನ್ನು ನೀಡಲು ಮುಂದೆ ಬಂದಿದ್ದಾರೆ. ಕೂಡಲೆ ಕಾಲೇಜಿಗೆ ಭೇಟಿ ಕೊಟ್ಟ ಬಿರುವೆರ್ ಕುಡ್ಲ ಸಂಘಟನೆ ಸದಸ್ಯರು ಶೋಭಿತಾಳ ಎರಡನೇ ವರ್ಷದ ಪೂರ್ಣ ಕಾಲೇಜು ಶುಲ್ಕವನ್ನು ಪಾವತಿಸಿ ಶೋಭಿತಾಳ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾದರು. ನಮ್ಮ ತಂಗಿ ಶೋಭಿತಾಳ ಭವಿಷ್ಯ ಉಜ್ವಲವಾಗಲಿ ಎಂದು ನಾವೆಲ್ಲರು ದೇವರಲ್ಲಿ ಪ್ರಾರ್ಥಿಸಿ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಅನುರಾಧ ಸಾಲ್ಯಾನ್, ಬಿರುವೆರ್ ಕುಡ್ಲ ಬಜಪೆ ಘಟಕದ ಪ್ರಧಾನ ಕಾರ್ಯದರ್ಶಿ ಸೂರಾಜ್ ಸುವರ್ಣ ಎಕ್ಕಾರು, ಕೋಶಾಧಿಕಾರಿ ರಾಕೇಶ್ ಅಂಚನ್, ಕೆಂಜಾರು – ಕಾನ ವಲಯದ ಸಂಚಾಲಕರು ಪ್ರಶಾಂತ್ ಪೂಜಾರಿ ಕಾನ, ಮನೋಜ್ ಪೂಜಾರಿ ಕುಪ್ಪೆಪದವು,ಚೇತನ್ ಪೂಜಾರಿ ಕಂದಾವರ ಮತ್ತು ವಿಶ್ವನಾಥ್ ಕುಲಾಲ್ ಉಪಸ್ಥಿತರಿದ್ದರು.