ಬಂಟ್ವಾಳ(ಅ.೦೩, ಕುಲಾಲ್ ವರ್ಲ್ಡ್ ನ್ಯೂಸ್): ಪ್ರತಿಯೊಬ್ಬ ಹಿರಿಯ ನಾಗರಿಕ ತನ್ನ ಹಕ್ಕುಗಳನ್ನು ತಿಳಿದು ತನಗೆ ದೊರಕಬೇಕಾದ ಸೌಲಭ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಂದು ನಡೆದ ಹಿರಿಯರ ಸಭೆಯಲ್ಲಿ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆಯಾಯಿತು.
ಪ್ರಥಮ ದಿನದಂದು ೨೬ ಸದಸ್ಯರು ಸದಸ್ಯರಾಗಿ ನೋಂದಾಯಿಸಿಕೊಂಡರು. ಸಂಘದ ಅಧ್ಯಕ್ಷರಾಗಿ ಸುಂದರ್ ಬಿ ನಿವೃತ್ತ ಬ್ಯಾಂಕ್ ಪ್ರಬಂಧಕರು, ಪ್ರಧಾನ ಕಾರ್ಯದರ್ಶಿಯಾಗಿ ಟಿ ಶೇಷಪ್ಪ ಮಾಸ್ಚರ್, ಉಪಾಧ್ಯಕ್ಷರುಗಳಾಗಿ ವಿಠ್ಠಲ ಬಂಗೇರ ಸಾಮಾಜಿಕ ಕಾರ್ಯಕರ್ ರು, ಸೋಮಯ್ಯ ಹೆಚ್ ನಿವೃತ್ತ ಬ್ಯಾಂಕ್ ಅಧಿಕಾರಿ, ಕೋಶಾಧಿಕಾರಿಯಾಗಿ ಪದ್ಮನಾಭ ಎಮ್ ನಿವೃತ್ತ ಶಿರಸ್ತೇದಾರ್ ಕಂದಾಯ ಇಲಾಖೆ, ಜೊತೆ ಕಾರ್ಯದರ್ಶಿಯಾಗಿ ರತ್ನಾವತಿ ನಿವೃತ್ತ ಬ್ಯಾಂಕ್ ಅಧಿಕಾರಿ, ಗೌರವ ಲೆಕ್ಕ ಪರಿಶೋಧಕರಾಗಿ ಲಕ್ಷ್ಮಣ್ ನಿವೃತ್ತ ಅಧಿಕಾರಿ ಕಂದಾಯ ಇಲಾಖೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭೋಜ ಮುಡಿಪು,ಕೃಷ್ಣ ಶ್ಯಾಂ ಬಿ ಸಿ ರೋಡ್, ರಾಮಪ್ಪ ಕೊಡ್ಮಾಣ್, ಜನಾರ್ಧನ ಸಾಲಿಯಾನ್ ವೀರಕಂಭ, ಓಬಯ್ಯ ಮೂಲ್ಯ ಸುಧೆಕಾರ್ ,ಕ್ರಷ್ಣಪ್ಪ ಮೂಲ್ಯ ಜಕ್ರಿಬೆಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಸಮಾಜ ಬಾಂಧವರು ಸರಕಾರದ ಸವಲತ್ತು ಪಡೆಯುವ ಸಲುವಾಗಿ ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಸಂಘದ ಸದಸ್ಯರನ್ನು ಸಂಪರ್ಕಿಸಲು ಕೋರಲಾಗಿದೆ.