ಮಂಗಳೂರು(ಅ. , ಕುಲಾಲ್ ವರ್ಲ್ಡ್ ನ್ಯೂಸ್): ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಂಗಳೂರು ಜಪ್ಪಿನಮೊಗರು ತಂದೊಳಿಗೆಯ ೩ನೇ ತರಗತಿಯ ಬಾಲಕಿ ಮನ್ವಿತಾ ಕುಲಾಲ್ ಅವರ ಕುರಿತ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು 4 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತ ನೆರವಿನ ರೂಪದಲ್ಲಿ ಸಂಗ್ರಹವಾಗಿದೆ.
ಮನ್ವಿತಾಗೆ ಸಹಾಯ ನೀಡುವ ಕುರಿತಂತೆ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವೆಬ್ ಸೈಟ್ ಸೆ.೫ರಂದು `ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಬಾಲೆ ಮನ್ವಿತಾ ಕುಲಾಲ್ ಗೆ ಸಹಾಯ ಮಾಡುವಿರಾ..?’ ಎಂಬ ವರದಿ ಪ್ರಕಟಿಸಿತ್ತು. ಅಲ್ಲದೆ `ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗವು ಈಕೆಗೆ 1,60,560/- ರೂ. ಸಂಗ್ರಹಿಸಿ ನೀಡಿತ್ತು.
`ಕುಲಾಲ್ ವರ್ಲ್ಡ್ ‘ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಪರಿಣಾಮವಾಗಿ ಮೊಟ್ಟಮೊದಲು ಬೆಂಗಳೂರಿನ ಶಾಲಾ ಬಾಲಕಿಯೊಬ್ಬಳು ತನಗೆ ಸಿಕ್ಕ 5000/- ಗೌರವಧನವನ್ನು ಮನ್ವಿತಾಗೆ ನೀಡಿ ಮಾದರಿಯಾದಳು. ಆ ಬಳಿಕ ಅಲ್ಪ ಸಮಯದಲ್ಲೇ ಹಲವು ಸಂಘ ಸಂಸ್ಥೆಗಳು ಮನ್ವಿತಾಳ ನೋವಿಗೆ ಸ್ಪಂದಿಸಿವೆ.
ಬೆಹರೈನ್ ಕುಲಾಲ ಮಿತ್ರರು-20,000 ರೂ., ಕುಡ್ಲ ಕುಲಾಲ ಯುವವೇದಿಕೆ-23,102ರೂ., ಬೈಕರ್ಸ್ ಗ್ರೂಪ್- 35,000 ರೂ., ಕಲ್ಮಾಡಿ ಹುಲಿ ವೇಷ ತಂಡ 50,000 ರೂ., ಮಂಗಳೂರು ಯುವನ ಟ್ರಸ್ಟ್ 25,000 ರೂ., ಬಿರುವೆರ್ ಕುಡ್ಲ 1,00,000 ರೂ., ಕೊಲ್ಯ ಕುಲಾಲ ಸಂಘ 15,000 ರೂ. ಅಲ್ಲದೆ ಹೆಸರು ತಿಳಿಸಲಿಚ್ಛಿಸದ ಫ್ಯಾಮಿಲಿ ಟ್ರಸ್ಟ್ ಹಾಗೂ ಇಬ್ಬರು ದಾನಿಗಳು ಒಟ್ಟು 20,000 ರೂ. ಸಹಾಯ ಹಸ್ತ ಚಾಚುವ ಮೂಲಕ ಕಡು ಕಷ್ಟದಲ್ಲಿದ್ದ ಮನ್ವಿತಾಳ ಕುಟುಂಬದಲ್ಲಿ ಆಶಾಕಿರಣ ಮೂಡಿಸುವಲ್ಲಿ ನೆರವಾಗಿದ್ದಾರೆ. ನೆರವು ನೀಡಿ ಸಹಕರಿಸಿದ ಎಲ್ಲಾ ಸಹೃದಯಿ ದಾನಿಗಳಿಗೂ ಮನ್ವಿತಾ ಅವರ ತಂದೆ ಸುರೇಶ್ ಬಂಗೇರ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.