ಬಂಟ್ವಾಳ(ಸೆ.೩೦, ಕುಲಾಲ್ ವರ್ಲ್ಡ್ ನ್ಯೂಸ್): ಪ್ರಗತಿಪರ ಕೃಷಿಕ, ಧಾರ್ಮಿಕ ಮುಖಂಡ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ದೇವಂದಬೆಟ್ಟು ನಿವಾಸಿ ಶೇಜು ಬಂಜನ್ (93ವರ್ಷ) ಅಲ್ಪಕಾಲದ ಅಸೌಖ್ಯದಿಂದ ಸೆ. 30ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೃಷಿಯಲ್ಲಿ ತೊಡಗಿಸಿಕೊಂಡು ಪ್ರಗತಿಪರ ಕೃಷಿಕರೆನಿಸಿಕೊಂಡಿದ್ದ ಶೇಜು ಬಂಜನ್ ಉತ್ತಮ ಕೃಷಿಕ ಪ್ರಶಸ್ತಿಯನ್ನು ಗಳಿಸಿದ್ದರು. ಉಡುಪಿ ಫಣಿಯೂರು ಬಂಜನ್ ಗೋತ್ರದ ನಾಗ ಮೂಲಸ್ಥಾನದ ಸ್ಥಾಪಕ ಅಧ್ಯ್ಯಕ್ಷರಾಗಿದ್ದು , ಪಾದೆ-ಪಾವೂರು ಬಂಜನ್ ಗೋತ್ರದ ದೈವಾದಿಮೂಲಸ್ತಾನದ ಹಿರಿಯರಾಗಿದ್ದು ಕಳ್ಳಿಗೆ ಗ್ರಾಮ ದೇವಂದಬೆಟ್ಟು ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಶ್ರೀರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು, ಕನಪಾಡಿತ್ತಾಯ ದೈವಸ್ತಾನ ಕಳ್ಳಿಗೆ ಇಲ್ಲಿಯ ಕನಪಾಡಿತ್ತಾಯ ಜೀರ್ಣೋದ್ಧಾರ ಕಾರ್ಯದಲ್ಲಿ ಸಕ್ರಿಯ ಪದಾಧಿಕಾರಿಯಾಗಿದ್ದರು.
ಕಳ್ಳಿಗೆ ಕನಪಾಡಿತ್ತಾಯ ದೈವಸ್ತಾನ ತಲೆಪಟ್ಟಿ ಸಮರ್ಪಣೆ ಸಮಿತಿ ಇದರ ಗೌರವಾದ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು, ಇವರ ಹಿರಿಯರು, ಮಂಗಳೂರು ತಾಲೂಕು ಕುಂಜತ್ತಬೈಲು ಮಲರಾಯ ದೈವಸ್ಥಾನದ ಮೂಲ್ಯಣ್ಣರಾಗಿ ಸೇವೆ ಸಲ್ಲಿಸಿದ್ದರು. ಮೂಲತಃ ಕುಂಜತ್ತಬೈಲು ಗ್ರಾಮ ದೋಟದವರಾದ ಶೇಜು ಅವರು ಸುಮಾರು 45 ವರ್ಷಗಳಿಂದ ಬಂಟ್ವಾಳದ ಕಳ್ಳಿಗೆ ಗ್ರಾಮದಲ್ಲಿ ನೆಲೆಸಿದ್ದರು.
ಮೃತರು ಪತ್ನಿ ಸುಂದರಿ ಕರ್ಮರನ್, ಮಕ್ಕಳಾದ ಇಂಜಿನಿಯರ್ -ಆನಂದ ಬಂಜನ್, ಸಮಾಜ ಸೇವಾ ಸಹಕಾರಿ ಬೇಂಕ್ ಬಂಟ್ವಾಳ ನಿರ್ದೇಶಕ ಲೋಕನಾಥ್ ಸೇರಿದಂತೆ 4 ಗಂಡು ಮತ್ತು 3 ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಬ್ರಹ್ಮರಕೂಟ್ಲು – ದೇವಂದಬೆಟ್ಟು ಸ್ವಗ್ರಹದಲ್ಲಿ ಸೆ. 30ರಂದು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.