ಕಾಪು(ಸೆ.೧೭, ಕುಲಾಲ್ ವರ್ಲ್ಡ್ ನ್ಯೂಸ್) : ಯಾವಾಗಲೂ ಬಡವರಿಗೆ ಆ ದೇವರು ಕಷ್ಟಗಳ ಮೇಲೆ ಕಷ್ಟಗಳನ್ನೆ ನೀಡುತ್ತಾನೆ. ನೊಂದ ಜೀವಗಳಿಗೆ ಮತ್ತಷ್ಟು ನೋವುಗಳನ್ನೆ ನೀಡಿ ನಗುತ್ತಾನೆ ಎಂಬ ಮಾತಿದೆ. ಎರಡು ಕಿಡ್ನಿ ವೈಪಲ್ಯದಿಂದ ಸಾವು ನೋವುಗಳ ನಡುವೆ ಒದ್ದಾಡುತ್ತಿರುವ ಬೆಳಪು ಗ್ರಾಮದ ಪಣಿಯೂರಿನ ಬಡ ಯುವಕ ಹರೀಶ್ ಮೂಲ್ಯರನ್ನು ನೋಡಿದಾಗ ಈ ಮಾತು ದಿಟ ಅನ್ನಿಸುತ್ತೆ.. ನೋವಿನ ನಿಟ್ಟುಸಿರೊಂದು ಮನದಿಂದ ಹೊರಚೆಲ್ಲುತ್ತದೆ.
ಹೌದು, ಬೆಳಪು ಗ್ರಾಮದ ಪಣೆಯೂರಿನ ಕಣಂಜರ ಮೂಲ್ಯ ಮತ್ತು ಗುಲ್ಲಿ ಮೂಲ್ಯ ದಂಪತಿಗಳಿಗೆ ಆರು ಹೆಣ್ಣು ಮಕ್ಕಳು. ಒಬ್ಬನೇ ಒಬ್ಬ ಗಂಡುಮಗ. ಆತನೇ ಹರೀಶ್ ಮೂಲ್ಯ. ಹುಟ್ಟುವಾಗಲೇ ಬಡತನವನ್ನು ಬಳುವಳಿಯಾಗಿ ಪಡೆದುಕೊಂಡು ಹುಟ್ಟಿದ ಹರೀಶ್ ಆ ಬಡತನಕ್ಕೆ ಸವಾಲಾಗಿ ನಿಂತವರು. ತನ್ನ ಕೂಲಿ ಕೆಲಸದ ಪೈಸೆ ಪೈಸೆಯನ್ನು ಒಗ್ಗೂಡಿಸಿ ಐವರು ಸಹೋದರಿಯರಿಗೆ ಮದುವೆ ಮಾಡಿ ದೊಡ್ಡ ಜವಾಬ್ದಾರಿಯನ್ನು ಪೂರೈಸಿ ಖುಷಿ ಪಟ್ಟಿದ್ದರು. ತಾನಿನ್ನು ನೆಮ್ಮದಿಯಿಂದ ಮದುವೆಯಾಗಬೇಕು, ತನಗೊಂದು ಸಂಸಾರ ಬೇಕು ಎಂಬ ಕನಸ್ಸನ್ನು ಆಗಷ್ಟೇ ಹೊತ್ತಿದ್ದರು. ಆದರೆ ಆ ವಿಧಿ ಅವರ ಬಾಳಿನಲ್ಲಿ ಕ್ರೂರ ಆಟವನ್ನು ಆಡಿಯೇ ಬಿಟ್ಟಿದ್ದ.
ಎಲ್ಲ ಜವಾಬ್ದಾರಿ ಮುಗಿಯಿತು ಎಂಬ ನೆಮ್ಮದಿಯಲ್ಲಿ ಇರುವಾಗಲೇ ಹರೀಶ್ ಮೂಲ್ಯ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡಿತು. ಪರೀಕ್ಷೆಗೆಂದು ಆಸ್ಪತ್ರೆಯ ದಾರಿ ಹಿಡಿದಾಗ ತಿಳಿದಿದ್ದು ತನ್ನ ಎರಡು ಕಿಡ್ನಿ ವೈಫಲ್ಯ ಹೊಂದಿದೆ ಎಂಬ ಕ್ರೂರ ಸತ್ಯ. ತಾನು ಕೂಲಿ ಕೆಲಸದಿಂದ ದುಡಿದ ಎಲ್ಲ ಹಣವನ್ನು ಸಂಸಾರಕ್ಕೆ ಖರ್ಚು ಮಾಡಿ ಕಿಸೆ ಬರಿದಾಗಿರುವ ಈ ಯುವಕ ಕಿಡ್ನಿ ಸಮಸ್ಯೆಯ ಚಿಕಿತ್ಸೆಗೆ ಧನ ಸಹಾಯ ತುರ್ತಾಗಿ ಬೇಕಿದೆ. ದಾನಿಗಳ, ಸಹೃದಯರ ಎದುರು ದೀನನಾಗಿ ‘ಸಹಾಯ ಮಾಡುವಿರಾ’ ಎಂದು ಕೈಚಾಚಿ ಕೇಳುತ್ತಿದ್ದಾನೆ.
ಬದುಕಿನಲ್ಲಿ ತುಂಬಾ ಜವಾಬ್ದಾರಿಯಿದ್ದ ಈ ಕುಲಾಲ ಯುವಕನ ಕಣ್ಣೀರನ್ನು ನೋಡಿದರೆ ಎಂತಹವರ ಮನಸ್ಸು ಮಮ್ಮಲ ಮರುಗೀತು. ಮಂಗಳೂರಿನ ವಿನಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈತನ ಸಮಸ್ಯೆಗೆ ಲಕ್ಷಾಂತರ ರೂ ತುರ್ತಾಗಿ ಬೇಕಿದೆ. ಕರಾವಳಿ ಕುಲಾಲ ಯುವ ವೇದಿಕೆ ಕಾಪು ಘಟಕ ಈ ಬಡ ತರುಣನ ಚಿಕಿತ್ಸೆಗೆ ಹಣ ಸಂಗ್ರಹಿಸಿ ಕೊಡುವ ಜವಾಬ್ದಾರಿಯನ್ನು ಹೊತ್ತಿದೆ. ಸಮುದಾಯದ ನಾಯಕರಗಳು, ಸಹೃದಯರು ತಮ್ಮ ಕೈಲಾದಷ್ಟು ಧನ ಸಹಾಯ ನೀಡಿದರೆ ಈ ಯುವಕ ಮತ್ತೆ ಮೊದಲಿನಂತಾದಾನು.
ಯೌವನದ ಹೊಸ್ತಿಲಲ್ಲಿರುವ ಜವಬ್ದಾರಿಯ ಯುವಕ ಆಸ್ಪತ್ರೆಯ ನಳಿಗೆಗಳನ್ನು ಸಿಕ್ಕಿಸಿಕೊಂಡು ಮಲಗಿರುವುದನ್ನು ನೋಡಲೇ ಕಷ್ಟವಾದೀತು. ನೀವು ನಿಮ್ಮಿಂದಾದಷ್ಟು ಕಿಂಚಿತ್ ಸಹಾಯ ಮಾಡಿದರು ಹರೀಶ್ ಮೂಲ್ಯರಿಗೆ ಅದೇ ದೊಡ್ಡ ಸಹಾಯ.. ಈತನ ಚಿಕಿತ್ಸೆಗೆ ಧನ ಸಹಾಯ ಮಾಡುವಿರಾ..?.
ಧನ ಸಹಾಯ ಮಾಡುವವರು ಹರೀಶ್ ಮೂಲ್ಯ ಅಕ್ಕನ ಮಗ ರಕ್ಷಿತ್ ಅವರ ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು.
Rakshith Kulal
A/c Num-018000101050757
Corporation Bank M.G road, Mangalore
Ifsc code-CORP0000180
ರಕ್ಷಿತ್ ಕುಲಾಲ್ ಸಂಪರ್ಕ ಸಂಖ್ಯೆ- 9686003293
ಈ ಬಗ್ಗೆ ಯಾವುದೇ ಮಾಹಿತಿಗೆ ಕಾಪು ಕುಲಾಲ ಯುವ ವೇದಿಕೆಯ ಉದಯ ಕುಲಾಲ್-9844344253 ಜನಾರ್ಧನ್ ಕುಲಾಲ್ ಪಣಿಯೂರು-9741671850 ಅವರನ್ನು ಸಂಪರ್ಕಿಸಬಹುದು..