ಉಡುಪಿ(ಸೆ.೦೪, ಕುಲಾಲ್ ವರ್ಲ್ಡ್ ನ್ಯೂಸ್): `ಪ್ರತಿ ಹಳ್ಳಿ ಹಳ್ಳಿಯಲ್ಲಿ ಕುಲಾಲ ಸಮಾಜದವರನ್ನು ಒಟ್ಟುಗೂಡಿಸಿ ಸಂಘಟನೆಯನ್ನು ಮಾಡಬೇಕು ,ಆ ಮೂಲಕ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ’ ಎಂದು ಖ್ಯಾತ ವೈದ್ಯ ಎಂ ವಿ ಕುಲಾಲ್ ಅವರು ಹೇಳಿದರು.
ಕುಲಾಲ ಸಂಘ ರಿ ಪೆರ್ಡೂರು ಇದರ 9 ನೇ ವರ್ಷದ ವಾರ್ಷಿಕೋತ್ಸವ ಮತ್ತು ವಿದ್ಯಾ ಪ್ರೋತ್ಸಾಹಧನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಯೊಂದೇ ನಮ್ಮನ್ನು ಕಾಪಾಡಬಲ್ಲ ಬಲು ದೊಡ್ಡ ಶಕ್ತಿ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಕುಲಾಲ ಸಮಾಜದ ಹಿರಿಯ ಧುರೀಣ ಸಂಘದ ಅಧ್ಯಕ್ಷರಾದ ಐತು ಕುಲಾಲ ವಹಿಸಿದ್ದರು. ಸಮಾರಂಭದಲ್ಲಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ದಿಕ್ಸೂಚಿ ಭಾಷಣ ಮಾಡಿ, ಕುಲಾಲ ಸಮುದಾಯದ ಹಿನ್ನೆಲೆ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಯ ಕುರಿತು ವಿವರಿಸಿದರು.
ವೇದಿಕೆಯಲ್ಲಿ ಪ್ರಭಾಕರ್ ಕುಲಾಲ್, ಈಶ್ವರ ಕುಲಾಲ್, ಸಂಘದ ಗೌರವಾದ್ಯಕ್ಯರು ರಾಮ ಕುಲಾಲ್ ಪಕ್ಕಾಲು ,ಉಪಾಧ್ಯಕ್ಷರು ಕೃಷ್ಣಪ್ಪ ಕುಲಾಲ್, ಕಾಳು ಕುಲಾಲ್, ಬೋಜು ಕುಲಾಲ್, ಬೋಜ ಕುಲಾಲ್ ಬೇಳಿಂಜೆ, ಸಂಘದ ಪ್ರದಾನ ಕಾರ್ಯದರ್ಶಿ ಯೊಗೀಶ್ ಕುಲಾಲ್, ಮಹಿಳಾ ಸಂಘದ ಅಧ್ಯಕ್ಷೆ ಗೀತಾ ಕುಲಾಲ್ ಪರ್ಕಳ, ಪ್ರಪುಲ್ಲ ಎಸ್ ಕುಲಾಲ್, ಹಾಗೂ ಸಂಘದ ಎಲ್ಲಾ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು.
ಮಧ್ಯಾಹ್ನ `ಕುಂಭ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಂಜೆ ಕುಲಾಲ ಸಮುದಾಯ ಭವನಕ್ಕೆ ಹಿಂದುಳಿದ ವರ್ಗಗಳ ಇಲಾಖೆಯ ಮೂಲಕ ರೂ 25 ಲಕ್ಷ ಅನುದಾನ ಬಿಡುಗಡೆಗೊಳಿಸಿದ ಶಾಸಕರಾದ ವಿನಯಕುಮಾರ್ ಸೊರಕೆ ಇವರಿಗೆ ಸನ್ಮಾನ ಸಮಾರಂಭ ನಡೆಯಿತು.
ಗಣೇಶ್ ಕುಲಾಲ ಪಕ್ಕಾಲು ಕಾರ್ಯಕ್ರಮ ನಿರೂಪಿಸಿದರು, ಹರೀಶ್ ಕುಲಾಲ ಹಂದಿಬೆಟ್ಟು ಧನ್ಯವಾದ ವಿತ್ತರು.