ಮಂಗಳೂರು(ಜೂ.೧೯) : ಕುಳಾಯಿ ಕುಲಾಲ ಸಂಘ, ಮಹಿಳಾ ಮಂಡಲ ಹಾಗೂ ರಜತ ಸೇವಾ ಟ್ರಸ್ಟ್ ಇದರ ಸಂಯುಕ್ತ ಅಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ-ಕಲಿಕಾ ಸಲಕರಣೆ ವಿತರಣೆ ಹಾಗೂ ಈ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವು ಕುಳಾಯಿ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜೂನ್ ೧೮ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶ್ರೀಕುಮಾರ್ ಕಾವಿನಕಲ್ಲು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ದ.ಕ ಜಿಲ್ಲಾ ನಿರ್ದೇಶಕ, `ಮತ್ತೆ ಹುಟ್ಟಿ ಬಾ ಸರ್ವಜ್ಞ’ ಪುಸ್ತಕದ ಕರ್ತೃ ಆನಂದ ಬಂಜನ್, ಮೂಲ್ಯರ ಮಾತೃ ಸಂಘದ ಕಾರ್ಯದರ್ಶಿ ಪ್ರಸಾದ್ ಸಿದ್ಧಕಟ್ಟೆ, ಅರ್ಪಿತಾ ಸ್ಟುಡಿಯೋ ಮಾಲಕ ಪ್ರಭಾಕರ ಕುಲಾಲ್, ಬಿಎಸ್ ಎನ್ ಎಲ್ ನಿವೃತ್ತ ಅಧಿಕಾರಿ ವಾಮನ್ ಚಿತ್ರಾಪುರ, ಹಿರಿಯ ಮುಖಂಡ ಶಂಕರ ಐ ಮೂಲ್ಯ ಹೊಸಬೆಟ್ಟು, ಸಂಗೀತ ಶಿಕ್ಷಕಿ ರಾಜೇಶ್ವರಿ ಉದಯ್ ಭಾಗವಹಿಸಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.
ಕುಲಾಲ ರಜತ ಸೇವಾ ಟ್ರಸ್ಟ್ ನ ಅಧ್ಯಕ್ಷ ಶ್ರೀನಾಥ್, ಮಹಿಳಾ ಮಂಡಲದ ಅಧ್ಯಕ್ಷೆ ಬೇಬಿ ಪದ್ಮನಾಭ, ಸಂಘದ ಕಾರ್ಯದರ್ಶಿ ಗಣೇಶ್ ಕುಲಾಲ್ ,ಕೋಶಾಧಿಕಾರಿ ಹರೀಶ್, ನಾಗೇಶ್ ಕುಲಾಲ್ ಕುಳಾಯಿ ಹಾಗು ವಿದ್ಯಾರ್ಥಿ ನಾಯಕರಾದ ಚೇತನ್, ರಕ್ಷಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಂಗಾಧರ್ ಬಂಜನ್ ಸ್ವಾಗತಿಸಿದರು. ಕುಮಾರಿ ರಕ್ಷಾ ಕಾರ್ಯಕ್ರಮ ನಿರೂಪಿಸಿದರು.