ಮಂಗಳೂರು(ಜೂ.೧೨): ರಕ್ತದ ಕ್ಯಾನ್ಸರ್ ರೋಗಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಡ ಯುವಕನ ತಾಯಿಗೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಹಾಗೂ ಗೆಳೆಯರ ಬಳಗ ತಂಡದ ಸದಸ್ಯರು ಸೇರಿ ಒಟ್ಟು 30,000/- ರೂ. ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆಯಿತು.
ಬಂಟ್ವಾಳ ಕಾವಳಮುಡೂರು ಗ್ರಾಮದ ದಿವಂಗತ ಐತಪ್ಪ ಮೂಲ್ಯ ಮತ್ತು ಗಿರಿಜಾ ದಂಪತಿಯ ಪುತ್ರ ಸಂತೋಷ ಕುಲಾಲ್ ಯಾನೆ ಡೀಕಯ್ಯ ಅವರು ಕ್ಯಾನ್ಸರ್ ಮತ್ತು ಟಿ.ಬಿ ರೋಗಕ್ಕೀಡಾಗಿ ಚಿಕಿತ್ಸೆ ಫಲಕಾರಿಗದೇ ಮೃತಪಟ್ಟಿದ್ದರು. ಬಡ ಕುಟುಂಬದ ಸಂತೋಷ ಅವರಿಗೆ ತೀವ್ರ ಹಣಕಾಸಿನ ಮುಗ್ಗಟ್ಟಿನಿಂದ ತಮಗೆ ಬಾಧಿಸಿದ್ದ ರೋಗಕ್ಕೆ ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗಿರಲಿಲ್ಲ. ಆ ಬಳಿಕ ತಮ್ಮ ಏಕೈಕ ಮಗನನ್ನು ಕಳೆದುಕೊಂಡು ಜೀವನ ನಿರ್ವಹಣೆಗೆ ಪರದಾಡುತ್ತಿದ್ದ ಸಂತೋಷ್ ಅವರ ತಾಯಿ ಗಿರಿಜಾ ಅವರ ಸ್ಥಿತಿಯನ್ನು ಅರಿತ ಗೆಳೆಯರ ಬಳಗ ತಂಡವು ೨೦ ಸಾವಿರ ರೂ. ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ೧೦ ಸಾವಿರ ಹೀಗೆ ಒಟ್ಟು ಮೂವತ್ತು ಸಾವಿರ ರೂಪಾಯಿಯನ್ನು ಜೂ.೧೧ರಂದು ನೀಡಿ ಮಾನವೀಯತೆ ಮೆರೆದರು.
ಸಂತೋಷ್ ಹಾಗೂ ಅವರ ಕುಟುಂಬದ ಸ್ಥಿತಿಯ ಬಗ್ಗೆ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿದ್ದು, ಈ ಹಿಂದೆ `ಕುಲಾಲ್ ವರ್ಲ್ಡ್’ ವಾಟ್ಸಪ್ ಗುಂಪಿನ ಸದಸ್ಯರು ಒಟ್ಟು 88,191/- ರೂ. ಸಂಗ್ರಹಿಸಿ ನೀಡಿದ್ದರೆ, ಆ ಬಳಿಕ ಬೆಹರೈನ್ ಕುಲಾಲ ಮಿತ್ರರು 20 ಸಾವಿರ ರೂ. ಸಹಾಯಹಸ್ತ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.