ನಾನಿಲ್ತಾರ್ ಕುಲಾಲ ಸಂಘದ 29ನೇ ವಾರ್ಷಿಕ ಮಹಾಸಭೆ
ಕಾರ್ಕಳ(ಜೂ.೦೬): ಮುಂಡ್ಕೂರು ನಾನಿಲ್ತಾರ್ ಕುಲಾಲ ಸಂಘದ 29ನೇ ವಾರ್ಷಿಕ ಮಹಾಸಭೆಯು ಜೂ. ೩ರಂದು ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಮಂಜಪ್ಪ ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಇನ್ನ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕುಶ ಆರ್. ಮೂಲ್ಯ ಅವರು ಆಯ್ಕೆಯಾದರು. ಈ ಸಂದರ್ಭ ಮಾತನಾಡಿದ ಅವರು ತಮ್ಮ ಆಡಳಿತ ಅವಧಿಯಲ್ಲಿ ಹಿರಿಯ ಮುಖಂಡರ ಮಾರ್ಗದರ್ಶನ, ಸಂಘದ ಸದಸ್ಯರ ಸಹಕಾರದೊಂದಿಗೆ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸುವುದಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಂಗಳೂರು ತಾ.ಪಂ ಮಾಜಿ ಸದಸ್ಯ ವೈ. ಕೃಷ್ಣ ಸಾಲ್ಯಾನ್ ಭಾಗವಹಿಸಿ ಮಾತನಾಡಿ, ಸತತ ೨೪ ವರ್ಷಗಳಿಂದ ಸಂಘದ ಏಳಿಗೆಗಾಗಿ ದುಡಿದ ಮಂಜಪ್ಪ ಮೂಲ್ಯರ ಕಾರ್ಯವೈಖರಿಯನ್ನು ಶ್ಲಾಘಿಸಿ, ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದ ಮಂಜಪ್ಪ ಮೂಲ್ಯ ಹಳೆ ಬೇರು, ಹೊಸ ಚಿಗುರು-ಕೂಡಿರಲು ಮರ ಸೊಬಗು ಎಂಬಂತೆ ಸಮಾಜದ ಹಿರಿಯರ ಮತ್ತು ಕಿರಿಯರ, ಯುವಕರ ಸಮಾಗಮ ಇದಾಗಿದ್ದು, ಪರಸ್ಪರ ಸಮನ್ವಯತೆ ಸಮಾಜದ ಏಳಿಗೆಗೆ ಅತ್ಯಗತ್ಯ. ಸಂಘದ ಪದಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ ಸಮಾಜ ಕಟ್ಟುವ ಕೆಲಸದಲ್ಲಿ ತೊಂಡಗಿಸಿಕೊಂಡು ತಮ್ಮ ಅಮೂಲ್ಯ ಸೇವೆ ನೀಡುದರೊಂದಿಗೆ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕೆಂದು ಕಿವಿಮಾತು ಹೇಳಿ, ಸಂಘದ ಏಳಿಗೆಗಾಗಿ ಸಂಘದ ಆರಂಭದಿಂದ ಇಲ್ಲಿಯವರೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಉದ್ಯಮಿಗಳಾದ ಶಂಭು ಮೂಲ್ಯ ಸಾಂತೂರು, ಲವ ಆರ್. ಮೂಲ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಮೂಲ್ಯ, ಕೃಷ್ಣ ಮೂಲ್ಯ ನಲಸೋಪರ, ಸುಂದರ ಮೂಲ್ಯ, ವಾರಿಜಾ ಮೂಲ್ಯ ಉಪಸ್ಥಿತರಿದ್ದರು. ಇದೇ ವೇಳೆ ಸಂಘದ ವ್ಯಾಪ್ತಿಯ ೧೦ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ನಡೆಯಿತು. ಕುಶ ಆರ್ ಮೂಲ್ಯ ಸ್ವಾಗತಿಸಿದರೆ, ಕವಿತಾ ವರದಿ ವಾಚಿಸಿದರು. ಸುಧಾಕರ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗು ಸಭಾ ಕಾರ್ಯಕ್ರಮದ ಬಳಿಕ ಮನರಂಜನಾ ಕಾರ್ಯಕ್ರಮದಂಗವಾಗಿ ಮುಂಡ್ಕೂರ್ ಸುಧಾಕರ ಮೂಲ್ಯ ಅವರ ಪ್ರಾಯೋಜಕತ್ವದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು.
ಸಂಘದ ನೂತನ ಪದಾಧಿಕಾರಿಗಳ ವಿವರ :
ಅಧ್ಯಕ್ಷರು : ಕುಶ ಆರ್ ಮೂಲ್ಯ
ಉಪಾಧ್ಯಕ್ಷರು : ಬೊಗ್ಗು ಮೂಲ್ಯ ಬೇಲಾಡಿ, ಪ್ರಭಾಕರ ಇನ್ನಾ,
ಕಾರ್ಯದರ್ಶಿ : ಸುಧಾಕರ ಕುಲಾಲ್ ಮುಂಡ್ಕೂರು
ಜೊತೆ ಕಾರ್ಯದರ್ಶಿ : ರಕ್ಷಿತಾ ಕುಲಾಲ್
ಕೋಶಾಧಿಕಾರಿ : ರತ್ನಾ. ಜಿ. ಮೂಲ್ಯ
ಮಹಿಳಾ ಘಟಕದ ಅಧ್ಯಕ್ಷೆ : ಆಶಾ ಹೊಸಹಿತ್ಲು
ಗೌರವ ಸಲಹೆಗಾರರು : ಮಂಜಪ್ಪ ಮೂಲ್ಯ
ಕಾರ್ಯಕಾರಿ ಸಮಿತಿ ಸದಸ್ಯರು : ಗೋಪಾಲ ಮೂಲ್ಯ ಮಡ್ಕೆ, ಸಂಜೀವ ಮೂಲ್ಯ, ಕಿಶೋರ್ ಕುಲಾಲ್, ಕರಿಯ ಮೂಲ್ಯ, ವಾರಿಜ ಮೂಲ್ಯ, ಪ್ರತಿಮಾ, ಅಶೋಕ್ ಕುಲಾಲ್, ಜಯರಾಮ ಮೂಲ್ಯ, ಸುಧಾಕರ ಸಾಲ್ಯಾನ್, ಸುಜಾತ ಮೂಲ್ಯ, ಅರುಣಾ ಕುಲಾಲ್, ಚಂದ್ರಶೇಖರ್, ಸಂಜೀವ ಮೂಲ್ಯ ನಂದಳಿಕೆ, ಆಶಾಲತಾ , ನಾಗರಾಜ ಕುಲಾಲ್
ಚಿತ್ರ-ವರದಿ : ಅರುಣಾ ಕುಲಾಲ್, ಉಳೇಪಾಡಿ