
ಮುಂಬಯಿ: 2016-17ನೇ ಸಾಲಿನ ಎಚ್ಎಸ್’ಸಿ ಪರೀಕ್ಷೆಯಲ್ಲಿ ಸೀವುಡ್ಸ್ ಎಸ್ ಎಸ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಕೌಶಿಕ್ ಮೂಲ್ಯ ಅವರು 81% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ನವಿಮುಂಬಯಿ ವಾಶಿಯ ಲಿಂಗಪ್ಪ ಮೂಲ್ಯ ಮತ್ತು ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರೇಮ ಎಲ್. ಮೂಲ್ಯ ದಂಪತಿಯ ಸುಪುತ್ರ.