ಮಸ್ಕತ್(ಮೇ.೨೪): ಕೊಲ್ಲಿ ರಾಷ್ಟ್ರಗಳಾದ ಕತಾರ್, ಬೆಹರೈನ್ ಬಳಿಕ ಇದೀಗ ಒಮಾನ್ ನಲ್ಲಿ ಕುಲಾಲ ಸಮಾಜದ ಸಮಾನಮನಸ್ಕ ಯುವಕರನ್ನು ಒಂದುಗೂಡಿಸುವ ಯತ್ನವೊಂದು ಸಫಲವಾಗಿದ್ದು, ಈಗಾಗಲೇ ಊರಿನ ಬಡ ಯುವಕನ ಸಂಕಷ್ಟಕ್ಕೆ ಮಿಡಿದು ನೆರವು ನೀಡುವ ಮೂಲಕ ಸಮಾಜ ಬಾಂಧವರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
`ಮರಳುಗಾಡಿನ ಮಲೆನಾಡು’ ಎಂದೇ ಕರೆಯಲ್ಪಡುವ ಒಮಾನ್ ದೇಶದ ಸಮಸ್ತ ಕುಲಾಲ/ಕುಂಬಾರ ಯುವಕರನ್ನು ಎಲ್ಲೆಡೆ ಪ್ರಚಲಿತದಲ್ಲಿರುವ ಫೇಸ್ಬುಕ್ ಹಾಗೂ ವಾಟ್ಸಪ್ ಸಾಮಾಜಿಕ ತಾಣದಲ್ಲಿ ಒಂದುಗೂಡಿಸುವ ನಿಟ್ಟಿನಲ್ಲಿ ಮೂಲತಃ ಉಪ್ಪಳದ ಯುವಕ ಡಿ.ಎಸ್. ಕುಲಾಲ್ ಅವರು ಕೈಗೊಂಡ ಒಂದು ಚಿಕ್ಕ ಪ್ರಯತ್ನ ಯಶಸ್ವಿಯಾಗಿದ್ದು, ಆರಂಭಿಕವಾಗಿ ಈ ಗುಂಪಿನಲ್ಲಿ 20 ಮಂದಿ ಸದಸ್ಯರಿದ್ದಾರೆ. ಬಜಪೆಯವರಾದ ರಿತೇಶ್ ಕುಲಾಲ್ ಅವರೂ ಡಿ.ಎಸ್ ಕುಲಾಲ್ ಅವರ ಜೊತೆ ಕೈಜೋಡಿಸಿ, ಗುಂಪು ಬಲಪಡಿಸಲು ಯತ್ನಿಸುತ್ತಿದ್ದಾರೆ.
ಡಿ.ಎಸ್. ಕುಲಾಲ್
ಗುಂಪಿನ ಸದಸ್ಯರು ಕೇವಲ ಒಮಾನ್ ಗೆ ಮಾತ್ರ ಸೀಮಿತವಾಗಿರದೇ ಮಸ್ಕತ್, ಸೋಹಾರ್, ಸಲಾಲ ಮತ್ತು ಸುರ್ ಪಟ್ಟಣಗಳಲ್ಲಿ ನೆಲೆಸಿರುವ ಕುಲಾಲ ಸಮಾಜ ಬಾಂಧವರನ್ನು ಒಂದೇ ವೇದಿಕೆಯಡಿಯಲ್ಲಿ ತಂದು ಪರಸ್ಪರರನ್ನು ಪರಿಚಯಿಸುವ ಉದ್ದೇಶದಿಂದ ಈ ಗುಂಪುನ್ನು ಆರಂಭಿಸಲಾಗಿದೆ. ಊರಿನ ಬಡ/ ಅಸಹಾಯಕ ಕುಟುಂಬಗಳಿಗೂ ಕೈಲಾದ ಸಹಾಯಹಸ್ತ ಚಾಚುವ ಸದುದ್ದೇಶವನ್ನೂ ಹೊಂದಿರುವ ಸದಸ್ಯರು`ಕುಲಾಲ್ ವರ್ಲ್ಡ್ ಡಾಟ್ ಕಾಂ‘ ಪ್ರಕಟಿಸಿರುವ ವರದಿಗೆ ಸ್ಪಂದಿಸಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ಕಾವಳಮುಡೂರು ಗ್ರಾಮದ ಐತಪ್ಪ ಮೂಲ್ಯ ಮತ್ತು ಗಿರಿಜಾ ದಂಪತಿಯ ಪುತ್ರ ಸಂತೋಷ್ ಅವರಿಗೆ ಈಗಾಗಲೇ 17,600 ರೂ. ನೆರವು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದೆ. ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಬೇಕುನ್ನುವ ತುಡಿತವನ್ನು ಹೊಂದಿರುವ ಈ ಗ್ರೂಪಿಗೆ ಸೇರಬಯಸುವ ಒಮಾನ್ ಪ್ರವಾಸಿಗರು ಡಿ.ಎಸ್ ಕುಲಾಲ್ ಅವರ ವಾಟ್ಸಪ್ ಸಂಖ್ಯೆ (+968 9118 7469)ಯನ್ನು ಸಂಪರ್ಕಿಸಬಹುದು.