ಬೆಂಗಳೂರು(ಮೇ.೨೨): ರಾಜ್ಯ ಕುಂಬಾರರ ಯುವ ಸೈನ್ಯ ಸಂಘಟನೆಯಲ್ಲಿ ಸ್ಥಾಪಕಾಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಈ ಬಿರುಕು ಹಿನ್ನೆಲೆಯಲ್ಲಿ ಸಂಘಟನೆಯನ್ನು ತಕ್ಷಣವೇ ಸಂಪೂರ್ಣವಾಗಿ ವಿಸರ್ಜನೆ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷ ಶಂಕರ ಶೆಟ್ಟಿ ಕುಂಬಾರ ಹೇಳಿಕೆ ನೀಡಿದ್ದಾರೆ.
ಸಂಘಟನೆಯಲ್ಲಿ ಸಕ್ರಿಯರಾಗಿದ್ದ ದುರ್ಗೆಶ್ ಕುಂಬಾರ್ ಹಾಗೂ ಹರೀಶ್ ಕುಂಬಾರ್ ಅವರನ್ನು ಸಂಘದಲ್ಲಿ ವಹಿಸಿದ್ದ ಜವಾಬ್ದಾರಿಯಿಂದ ಸ್ಥಾಪಕಾಧ್ಯಕ್ಷ ಜಗದೇವ.ಎಸ್ ಕುಂಬಾರ್ ಅವರು ಯಾವುದೇ ಸೂಚನೆ ಇಲ್ಲದೇ ತೆಗೆದು ಹಾಕಿರುವುದು ಈ ಒಡಕಿಗೆ ಕಾರಣ ಎನ್ನಲಾಗುತ್ತಿದೆ. ದುರ್ಗೇಶ ಕುಂಬಾರ ಅವರು ಈ ಸಂಘಟನೆಯ ಉಪಾಧ್ಯಕ್ಷರಾಗಿದ್ದರೆ, ಹರೀಶ್ ಕುಂಬಾರ್ ಅವರು ಯುವಸೈನ್ಯದ ಮೈಸೂರು ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಬ್ಬರನ್ನು ಸಂಘಟನೆಯಿಂದ ಕೈಬಿಡಲಾಗಿದೆ ಎಂದು ಜಗದೇವ.ಎಸ್ ಕುಂಬಾರ್ ಅವರು ಫೇಸ್ ಬುಕ್ ನಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿರುವ ರಾಜ್ಯಾಧ್ಯಕ್ಷ ಶಂಕರ ಶೆಟ್ಟಿ ಕುಂಬಾರ ಅವರು ಜಗದೇವ ಅವರು “ಇವರಿಬ್ಬರ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಂಘದಿಂದ ತೆಗೆದುಹಾಕಿದ್ದಾರೆ. ಈ ರೀತಿಯ ವರ್ತನೆಯನ್ನು ನಾವು ಸಹಿಸುವುದಿಲ್ಲ. ಜಗದೇವ ಕುಂಬಾರ ಅವರು ರಾಜ್ಯ ಸಮಿತಿಯಲ್ಲಿ ಚರ್ಚೆ ನಡೆಸದೆ ದುಂಡಾವರ್ತನೆ ತೋರಿರುವುದಲ್ಲದೆ. ಸಂಘದ ಒಗ್ಗಟ್ಟನು ಒಡೆಯುವ ಅಶಿಸ್ತು ಪ್ರದರ್ಶನ ಮಾಡಿದ್ದಾರೆ. ಅವರ ಈ ನಡವಳಿಕೆ ಸಂಘಟನೆಗೆ ಅಡ್ಡಿ ಆಗುತ್ತಿದೆ. ಇದು ಒಂದು ವ್ಯಕ್ತಿಯ ಸಂಘವಲ್ಲ, ಇದು ಸಮುದಾಯದ ಸಾಮಾಜಿಕ ಸಂಘಟನೆ. ಹಾಗಾಗಿ ರಾಜ್ಯ ಕುಂಬಾರರ ಯುವ ಸೈನ್ಯ (ರಿ)ಸಂಘಟನೆಯನ್ನು ತಕ್ಷಣವೇ ಸಂಪೂರ್ಣವಾಗಿ ವಿಸರ್ಜನೆ ಮಾಡಲಾಗುತಿದ್ದು, ಶೀಘ್ರದಲ್ಲೇ ಹೊಸದಾಗಿ ರಾಜ್ಯ ಕಾರ್ಯಕಾರಿಣಿ ಸಮಿತಿ ರಚಿಸಿ ಸಮರ್ಥ ಯುವ ನಾಯಕರ ಸ್ಯಾರಥದಲ್ಲಿ ರಾಜ್ಯ ಕುಂಬಾರರ ಯುವ ಸೈನ್ಯ ವನ್ನು ಪುನರ್ರಚನೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ. ಈ ನಡುವೆ ಹೇಳಿಕೆ ನೀಡಿರುವ ಜಗದೇವ ಕುಂಬಾರ ಅವರು ಶಂಕರ್ ಶಟ್ಟಿ ಕುಂಬಾರ ಅವರನ್ನು ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೈ ಬಿಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ .
ರಾಜ್ಯ ಕುಂಬಾರರ ಯುವ ಸೈನ್ಯದಲ್ಲಿ ಒಡಕು : ಸಂಘಟನೆ ವಿಸರ್ಜನೆಗೊಳಿಸಿದ ರಾಜ್ಯಾಧ್ಯಕ್ಷ
Kulal news
1 Min Read