ಮಂಗಳೂರು(ಏ.೨೯): ಕೊಳವೂರು ಸಮೀಪದ ಮುತ್ತೂರು ಬೆಜ್ಜೆ ಬಂಜನ್ (ಕುಲಾಲ) ಕುಟುಂಬದ ವತಿಯಿಂದ ನಾಗ ಪ್ರತಿಷ್ಠೆ, ಚಾವಡಿಯ ಗ್ರಹಪ್ರವೇಶ, ದೈವಗಳ ಪ್ರತಿಷ್ಠೆ ಹಾಗೂ ಸಾನಿಧ್ಯ ಕಲಶಾಭಿಷೇಕ ಮಹೋತ್ಸವವು ಮೇ 19ರಿಂದ ಮೂರು ದಿನಗಳವರೆಗೆ ನಡೆಯಲಿದೆ.
ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ಹಾಗೂ ಮೈಯ್ಯರ ಕುಟೇಲು ಶ್ರೀ ಮಾಧವ ಮೈಯ್ಯ ಇವರ ದಿವ್ಯ ಉಪಸ್ಥಿತಿಯಲ್ಲಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಯಯವರಿಂದ ಮೇ19ರಿಂದ 21ರವರೆಗೆ ನಡೆಯಲಿದೆ.
ತಾ.19.5.17 ರಂದು ಸಂಜೆ 5 ರಿಂದ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಪುಣ್ಯಾಹ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ,ವಸ್ತು ಪೂಜೆ, ದಿಶಾ ಬಲಿ ನಡೆಯಲಿದೆ.
20.5.17ರಂದು ಬೆಳಿಗ್ಗೆ 8ರಿಂದ ಪುಣ್ಯಾಹ, ಗಣಪತಿ ಹೋಮ, ಪರ್ವ ಪೂಜೆ, ಕಲಶಾಭಿಷೇಕ ಸಂಜೆ 6ರಿಂದ ಮಂಚ , ಬಿಂಬಾದಿಗಳ ಅದಿವಾಸ ಹಾಗೂ 21.5.17ರಂದು ಪುಣ್ಯಾಹ, ಗಣಪತಿ ಹೋಮ, ಅದಿವಾಸ ಹೋಮ,ಆಶ್ಲೇಷ ಬಲಿ, ಪ್ರತಿಷ್ಠಾ ಪೂಜೆ,ಗ್ರಹಪ್ರವೇಶ, ದೈವಗಳ ಪ್ರತಿಷ್ಠೆ ,ಕಲಸಾಭಿಷೇಕ ಮಹಾಪೂಜೆ, ನಾಗನಿಗೆ ಸಾನಿಧ್ಯ ಕಲಸಾಭಿಷೇಕ,ವಟು ಆರಾಧನೆ, ಮಹಾಪೂಜೆ, ಪ್ರಸಾದ ವಿನಿಯೋಗ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಕುಟುಂಬ ಸಮೇತರಾಗಿ ಆಗಮಿಸಿ ತನು- ಮನ-ಧನ ಗಳಿಂದ ಸಹಾಯ, ಸಹಕಾರಗಳನ್ನಿತ್ತು ಭಾಗವಹಿಸಿ ಶ್ರೀ ನಾಗದೇವರ ಹಾಗೂ ಪರಿವಾರ ದೈವಗಳ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಮುತ್ತೂರು ಬೆಜ್ಜೆ ಬಂಜನ್ ಕುಟುಂಬದ ಪರವಾಗಿ ಪದ್ಮನಾಭ್ ಕುತ್ತಾರ್ ಇವರು ವಿನಂತಿಸಿರುತ್ತಾರೆ.