ಪ್ರತಿಭೆಗಳ ಹುಡುಕುತ್ತಾ ಹೋದರೆ ಅನೇಕರು ಸಿಗುತ್ತಾರೆ. ಆದರೆ ಅವಕಾಶಗಳಿಂದ ವಂಚಿತರಾದವರು ಇರುವರು ಅವಕಾಶ ದೊರಕಿ ಹೆಸರು ಪಡೆದವರು ಹಲವರು. ಆಸಕ್ತಿಯಿಂದ ಕಲೆಯ ಕಡೆ ಆಕರ್ಷಣೆ ಹೊಂದಿ ಹೆತ್ತವರ ಅಪೇಕ್ಷೆಯಂತೆ ರಂಗ ಪ್ರವೇಶ ಮಾಡುವವರು ಇರುವರು.

ತುಳುನಾಡಿನ ಸಂಸ್ಕೃತಿ ಸಂಸ್ಕಾರ ವನ್ನು ಉಳಿಸುವ ಮತ್ತು ಉಳಿಸಿದ ಕಲೆ ಅಂತಂದ್ರೆ ಯಕ್ಷಗಾನ .ಹಿರಿಯರು ಕಿರಿಯರು ಎನ್ನದೇ ಪ್ರಚಲಿತದಲ್ಲಿರುವ ಅನೇಕ ತತ್ವ, ಆಚಾರ ವಿಚಾರ, ನೀತಿ ನಿಯಮ, ಉಪದೇಶಗಳನ್ನೂ ತಿಳಿಸುವ ಸುಂದರ ವರ್ಣಮಯ ದೃಶ್ಯ-ಕುಣಿತಗಳ ಭಂಡಾರ ರೂಪ ಮನಸಿಗೆ ಮುದ ನೀಡುವ ಕಲೆ ಯಕ್ಷಗಾನ.
ಇಂತಹ ಕಲೆಯ ಆಸಕ್ತಿ ಮತ್ತು ಹೆತ್ತವರ ಕನಸನ್ನು ನನಸು ಮಾಡುವ ಹೆಮ್ಮೆಯ ತುಳುನಾಡಿನ ಪ್ರತಿಭಾನ್ವಿತೆ ಕುಮಾರಿ ಮೇಘ ಕುಲಾಲ್.

ಎಲ್ಲಿ ಅವಕಾಶವಿರುವ ವೇದಿಕೆ ಇದೆಯೋ ಅಲ್ಲೆಲ್ಲಾ ಭಾಗವಹಿಸಿ ಜನಮಾನಸದಲ್ಲಿ ಸ್ಥಿರ ಸ್ಥಾನ ಪಡೆದ ಬಾಲಕಿ ಈಕೆ. ತಂದೆ ಗೋಪಾಲ ಕುಲಾಲ್ ಮತ್ತು ತಾಯಿ ಶಾರದಾ ದಂಪತಿಯ ಪುತ್ರಿಯಾದ ಈಕೆಗೆ ಒಬ್ಬ ಸಹೋದರ ಮತ್ತು ಸಹೋದರಿ ಇದ್ದು , ಪ್ರಸ್ತುತ ಈಗ ವಿ.ಎ.ಯು.ಪಿ.ಶಾಲೆ ಮೀಯಪದವಿನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಚಿಕ್ಕ ಹರೆಯದಲ್ಲೆ ಸಾಧನೆಯತ್ತ ಮುಖ ಮಾಡಿರುವ ಈಕೆ ಶಂಕರಾಚಾರ್ಯ ಮತ್ತು ನಾರಾಯಣ ಪೂಜಾರಿ ಅವರನ್ನು ಗುರುವಾಗಿ ಸ್ವೀಕರಿಸಿ ಯಕ್ಷಗಾನದತ್ತ ಒಲವು ತೋರಿ ರಂಗಪ್ರವೇಶ ಮಾಡುತ್ತಿದ್ದಾಳೆ.
ನೃತ್ಯ, ನಾಟಕ, ಮಾತ್ರವಲ್ಲದೆ ವ್ಯಾಸಂಗದಲ್ಲೂ ತನ್ನದೇ ಆದ ಶ್ರೇಷ್ಠತೆಯನ್ನು ಪಡೆದ ಈಕೆಯ ಮುಂದಿನ ಸಾಧನೆಗೆ ನಮ್ಮೆಲ್ಲರ ಆಶೀರ್ವಾದದ ಜೊತೆಗೆ ಪ್ರೋತ್ಸಾಹ ಅಗತ್ಯವಾಗಿದೆ. ಬೆಳೆಯುತ್ತಿರುವ ಪ್ರತಿಭೆಯು ಹೊಸ ಸಾಧನೆಯೊಂದಿಗೆ ಕಲೆಯ ಉನ್ನತಿಗೆ ಶ್ರೇಷ್ಟತೆಗೆ ಸಾಕ್ಷಿಯಾಗಲಿ.ಸ ದಾ ರಂಗಭೂಮಿಯಲ್ಲಿ ಮಿನುಗುವ ಪ್ರತಿಭಾ ನಕ್ಷತ್ರವಾಗು ಎನ್ನುವ ಹಾರೈಕೆ.
ಮುಂದೆ ಮುಂದೆ ಸಾಗು ಮರಿ
ಹಿಂದೆ ನೋಡು ಬಂದ ದಾರಿ
ಹರಸುವವನು ಶ್ರೀಹರಿ
ಶ್ರೀರಕ್ಷೆ ನಿನ್ನ ಉನ್ನತಿಯ ದಾರಿ
ರಂಗಭೂಮಿಯ ಸಾಧನೆಯ ಯಕ್ಷಮರಿ..
ಯೆನ್. ಕೆ. ಕುಲಾಲ್, ಬೇಕೂರು

