ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2025-26ನೇ ಸಾಲಿನ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 10ನೇ ತರಗತಿಯ ಪರೀಕ್ಷೆಯಲ್ಲಿ ಮಂಜೇಶ್ವರ ಕುಂಜತ್ತೂರು ಮಹಾಲಿಂಗೇಶ್ವರ ವಿದ್ಯಾನಿಕೇತನ ಇಲ್ಲಿನ ವಿದ್ಯಾರ್ಥಿನಿ ಶಚಿಷ್ಮಿತಾ ಎ ಕುಲಾಲ್ ಅವರು 97% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಡ್ಕ ನಿವಾಸಿ ಅಶೋಕ್ ಕುಲಾಲ್ ಮತ್ತು ಆಶಾಲತಾ ದಂಪತಿಯ ಸುಪುತ್ರಿ.

