ಮಂಗಳೂರು(ಏ.೨೮):ನೀರುಮಾರ್ಗ ದೇವಸ ಕುಲಾಲ ಬಂಜನ್ ಕುಟುಂಬಿಕರ ದೇವಸ ಶ್ರೀ ನಾಗಬ್ರಹ್ಮ ಮೂಲಸ್ಥಾನ ಆಡಳಿತ ಮಂಡಳಿ ಇದರ ಅಷ್ಟಪವಿತ್ರ ನಾಗಮಂಡಲೋತ್ಸವದ ಹೊರೆಕಾಣಿಕೆಯನ್ನು ಏ.೨೭ರಂದು ಜಿಲ್ಲೆಯ ನಾನಾ ಕಡೆಗಳಿಂದ ಸಮರ್ಪಿಸಲಾಯಿತು.
ಹೊರೆಕಾಣಿಕೆ ಮೆರವಣಿಗೆಗೆ ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಚಾಲನೆ ನೀಡಿ, ಬೊಳ್ಮಾರಗುತ್ತು ಶ್ರೀನಿವಾಸ್ ಭಟ್ ಶುಭಹಾರೈಸಿದರು. ವಾಮದಪದವು, ಸಿದ್ಧಕಟ್ಟೆ, ಬೆಳ್ತಂಗಡಿ, ಧರ್ಮಸ್ಥಳ,ಪುತ್ತೂರು ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಹೊರಕಾಣಿಕೆ ಬಿ.ಸಿ.ರೋಡಿನಲ್ಲಿ ಸೇರಿ ಬಳಿಕ ಮೆರವಣಿಗೆಯಲ್ಲಿ ಕುಲಶೇಖರ ವೀರನಾರಾಯಣ ದೇವಸ್ಥಾನದತ್ತ ತೆರಳಿತು.
ಸುರತ್ಕಲ್, ಕಿನ್ನಿಗೋಳಿ, ಶಿಬರೂರು, ಮುಂಡ್ಕೂರು, ಸಂಕಲ ಕರಿಯ ಏಳಿಂಜೆ, ಉಳ್ಳಾಲ, ತೊಕ್ಕೊಟ್ಟು ಸೇರಿದಂತೆ ನಗರದ ನಾನಾ ಕಡೆಯಿಂದ ಹೊರಟ ಮೆರವಣಿಗೆ ಕುಲಶೇಖರ ದೇವಸ್ಥಾನದತ್ತ ಆಗಮಿಸಿತು. ಎಲ್ಲ ಹೊರೆಕಾಣಿಕೆ ಮೆರವಣಿಗೆಗಳು ಮಧ್ಯಾಹ್ನ ನೀರುಮಾರ್ಗ ಸುಬ್ರಹ್ಮಣ್ಯ ಭಜನಾ ಮಂದಿರಕ್ಕೆ ತಲುಪಿದಾಗ ಅಲ್ಲಿ ಭಕ್ತಾಧಿಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲಿಂದ ಊರ ಪರವೂರ ಭಕ್ತಾದಿಗಳು ಅರ್ಪಿಸಿದ ಹೊರೆಕಾಣಿಕೆ ಮಾಧ್ಯಾಹ್ನ 2.30 ವೇಳೆಗೆ ಕೊಂಬು,ಚೆಂಡೆ, ಬ್ಯಾಂಡುಗಳ ವೈಭವದೊಂದಿಗೆ ಹೊರಟು ಸಂಜೆ ವೇಳೆಗೆ ನೀರುಮಾರ್ಗ ದೇವಸ ನಾಗಬ್ರಹ್ಮಸ್ಥಾನಕ್ಕೆ ತಲುಪಿತು. ಭಕ್ತರು ಹಿಂಗಾರ,ಹೂವು,ಎಳನೀರು,ಅಕ್ಕಿ, ತಂಗಿನಕಾಯಿ, ಹಣ್ಣುಹಂಪಲುಗಳನ್ನು ಹಸಿರು ಹೊರೆಕಾಣಿಕೆಯನ್ನು ಸಮರ್ಪಿಸಿದರು.
ಈ ಸಂದರ್ಭ ಅಧ್ಯಕ್ಷ ರಾಜ್ಕುಮಾರ್ ಬಿ.ಸಿ.ರೋಡ್, ಶಶಿಧರ್ ಭಟ್ ಬೊಳ್ಮಾರಗುತ್ತು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯಪದ್ಮನಾಭ ಕೋಟ್ಯಾನ್ ಪಡು, ಪ್ರೇಮಚಂದ್ ಭಟ್ ನೀರುಮಾರ್ಗ, ಗೌರವಾಧ್ಯಕ್ಷ ಗೋಪಾಲ ಮೂಲ್ಯ ದೊಡ್ಡಮನೆ, ಪ್ರಧಾನ ಕಾರ್ಯದರ್ಶಿ ಬಿ.ಬಿ. ಏಳಿಂಜೆ, ಕಾರ್ಯದರ್ಶಿ ರಾಜೇಶ್ ಶಿಬರೂರು, ಕೋಶಾಧಿಕಾರಿ ಯಶೋಧರ ಪೊಳಲಿ, ಸ್ವಾಗತ ಸಮಿತಿ ಸದಸ್ಯರದ ಸುರೇಶ್ ಕುಮಾರ್ ಸಂಚಯಗಿರಿ, ಮಹಾಬಲ ಕುಲಾಲ್ ನೀರುಮಾರ್ಗ, ಅಶೋಕ್ ಕುಳೂರು, ಬಾಲಕೃಷ್ಣ ಮಾಸ್ಟರ್, ನಾನಾ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.