ಕುಂದಾಪುರ(ಏ.೨೪) ಪ್ರತಿಯೊಬ್ಬರು ವಿದ್ಯಾವಂತರಾಗಿ, ಸಂಘಟಿತರಾಗಿ ಹಕ್ಕುಗಳಿಗೆ ಹೋರಾಟ ಮಾಡಬೇಕು ಎಂದು ಕುಂದಾಪುರ ಕುಲಾಲ ಸಂಘದ ಗೌರವಾಧ್ಯಕ್ಷ ಎಂ.ವಿ. ಕುಲಾಲ್ ಹೇಳಿದರು.
ವಕ್ವಾಡಿ ಮಡಗಬೆಟ್ಟು ಮೈದಾನದಲ್ಲಿ ನಡೆದ ಕರಾವಳಿ ಕುಲಾಲ ಯುವವೇದಿಕೆಯ ವಕ್ವಾಡಿ ಘಟಕದ ಮೊದಲ ವಾರ್ಷಿಕೋತ್ಸವ ಸಮಾರಂಭದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಸಂಘಟನೆಯ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕು. ಕುಲಾಲ ಸಮುದಾಯದಲ್ಲಿ ಸುಶಿಕ್ಷಿತರ ಪ್ರಮಾಣ ಕಡಿಮೆ ಇದೆ. ಸಮುದಾಯದ ಜನರು ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಕುಂದಾಪುರ ಕುಲಾಲ ಸಂಘದ ಅಧ್ಯಕ್ಷ ನಿರಂಜನ ಆಸೋಡು ಕಾರ್ರ್ಯಕ್ರಮ ಉದ್ಘಾಟಿಸಿದರು. ವಕ್ವಾಡಿ ಘಟಕದ ಅಧ್ಯಕ್ಷ ರಾಜು ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ಕಾಳಾವರ ಗ್ರಾ.ಪಂ ಅಧ್ಯಕ್ಷ ರವಿರಾಜ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಶೆಟ್ಟಿ, ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಶಿಕಾರಿಪುರ ವೈದ್ಯಾಧಿಕಾರಿ ಡಾ. ಬಸವ ಕುಲಾಲ್, ಪೆರ್ಡೂರು ಕುಂಬಾರರ ಗುಡಿಕೈಗಾರಿಕಾ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್, ಕರಾವಳಿ ಕುಲಾಲ ಯುವವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಲಾಲ್ ನಡೂರು, ಕುಂದಾಪುರ ವಲಯ ಅಧ್ಯಕ್ಷ ಹರೀಶ್ ಕುಲಾಲ್ ಕೆದೂರು, ಬೈಂದೂರು ವಲಯ ಅಧ್ಯಕ್ಷ ಮಂಜುನಾಥ ಕುಲಾಲ್ ಜನ್ಸಾಲೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಮಂಗಳೂರು ವಿವಿ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಥಮ ರಾಂಕ್ ಗಳಿಸಿದ ಭವ್ಯಶ್ರೀ ಕುಲಾಲ್ ಆವರ್ಸೆ, ಪ್ರತಿಭಾನ್ವಿತ ವಿದ್ಯಾರ್ಥಿನಿ ಅಶ್ವಿನಿ ಕುಲಾಲ್ ಕೊಂಜಾಡಿ, ಸಾಕ್ಸೋಪೋನ್ ವಾದಕಿ ಮಂದಾರ ವಿ.ಟಿ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯೂ ನಡೆಯಿತು.
ಅಷ್ವಿನಿ ಸ್ವಾಗತಿಸಿದರು, ರವಿಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು. ನರಸಿಂಹ ಕುಲಾಲ್ ವಂದಿಸಿದರು.