ಮಂಗಳೂರು(ಏ.೨೩): ಕರಾವಳಿ ಕುಲಾಲ/ಕುಂಬಾರರ ಯುವವೇದಿಕೆಯ ಕೇಂದ್ರ ಸಮಿತಿಯ ಆಶ್ರಯದಲ್ಲಿ ನಡೆದ ಮೂರನೇ ವರ್ಷದ ಪ್ರತಿಷ್ಠಿತ `ಸರ್ವಜ್ಞ ಟ್ರೋಫಿ -2017′ ನಿಗದಿತ ಓವರ್ ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಕಾಪು ಯುವವೇದಿಕೆ ವಿಜೃಂಭಿಸಿ ವಿಜಯಿಯಾಗಿದ್ದು ಟ್ರೋಫಿಯನ್ನು ತನ್ನ ಮುಡಿಗೇರಿಕೊಂಡಿದೆ. ಮಂಗಳೂರಿನ ಕೆಪಿಟಿ ಮೈದಾನದಲ್ಲಿ ನಡೆದ ಟ್ರೋಫಿ ಪಂದ್ಯದಲ್ಲಿ ಸುರತ್ಕಲ್ ತಂಡವನ್ನು ಬಗ್ಗು ಬಡಿಯುವ ಮೂಲಕ ಟ್ರೋಫಿ ಎತ್ತಿ ಹಿಡಿದಿದೆ.
ಉದ್ಘಾಟನೆ :
ಏಪ್ರಿಲ್ ೨೩ರಂದು ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭ ನಡೆದಿದ್ದು, ಕರಾವಳಿ ಕುಲಾಲ/ಕುಂಬಾರರ ಯುವವೇದಿಕೆಯ ಮಾಜಿ ಅಧ್ಯಕ್ಷ, ದ.ಕ ಜಿಲ್ಲಾ ಕುಲಾಲ ಮಾತೃ ಸಂಘ ಅಧ್ಯಕ್ಷರಾದ ಸುಜೀರ್ ಕುಡುಪು ಪಂದ್ಯಾಟವನ್ನು ಉದ್ಘಾಟಿಸಿದರು. ಸ್ಥಾಪಕ ಅಧ್ಯಕ್ಷರಾದ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ವೇದಿಕೆಯ
ನಾಯಕರುಗಳಾದ ಮೋಹಿತ್ ಬಿಜೈ ಜಯೇಶ್ ಗೋವಿಂದ್, ಗಂಗಾಧರ್ ಬಂಜನ್, ಅಶೋಕ್ ಕುಲಾಲ್, ದೇವಿ ಪ್ರಸಾದ್, ನಾರಾಯಣ ಬಂಗೇರ, ರಾಜೇಂದ್ರ ಕುಮಾರ್ ಹರೀಶ್ ಕುಳಾಯಿ, ಭೋಜ ಅಡ್ಯಾರ್, ಪ್ರಸಾದ್ ಸಿದ್ದಕಟ್ಟೆ, ಪ್ರಶಾಂತ್ ಶಕ್ತಿ ನಗರ, ಹೇಮಚಂದ್ರ ಕೈರಂಗಳ ಮುಂತಾದವರು ಉಪಸ್ಥಿತರಿದ್ದರು.
ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿ ಗಣ್ಯರು ಭಾಗವಹಿಸಿದ್ದು, ತಮ್ಮ ಮಾತುಗಳಲ್ಲಿ `ಸಾಹಸ ಪ್ರವತ್ತಿಯಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಅಂತಹ ಸಾಹಸ ಹಾಗೂ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಕರಾವಳಿ ಕುಲಾಲ/ಕುಂಬಾರ ಯುವವೇದಿಕೆ ಕುಂಬಾರ ಸಮುದಾಯದ ಸಾಮಾಜಿಕ ರಾಜಕೀಯ ಬೆಳವಣಿಗೆಗೆ ಗಟ್ಟಿಯಾದ ಬೇರಾಗಿ ,ಪ್ರಬಲ ಕೊಂಡಿಯಾಗಿ ಕೆಲಸ ಮಾಡಬೇಕಾಗಿದೆ . ಈಗಾಗಲೇ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಇವರ ನೇತೃತ್ವದಲ್ಲಿ ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಯುವವೇದಿಕೆಯ ಯುವಕರ ತಂಡದಿಂದ ಮತ್ತಷ್ಟು ಸಮುದಾಯವನ್ನು ಸಾಮಾಜಿಕ ಹಾಗೂ ರಾಜಕೀಯವಾಗಿ ಮೇಲೆತ್ತುವ ಕೆಲಸಗಳಾಗಲಿ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ನ್ಯಾಯವಾದಿ ರಾಂಪ್ರಸಾದ್ ಮಂಗಳೂರು, ಬಂಟ್ವಾಳ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಶ್ರೀಮತಿ ಬಬಿತಾ ರವೀಂದ್ರ , ಶ್ರೀಮತಿ ಮಮತಾ ಅಣ್ಣಯ್ಯ ಕುಲಾಲ್, ಭಾಗವಹಿಸಿ ಪ್ರಶಸ್ತಿ ವಿತರಿಸಿದರು. ಡಾ. ಅಣ್ಣಯ್ಯ ಕುಲಾಲ್, ಜಯೇಶ್ ಗೋವಿಂದ, ಮೋಹಿತ್ ಬಿಜೈ ಸುಜೀರ್ ಕುಡುಪು ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಬಂಟ್ವಾಳ ಬುಡಾ ಅಧ್ಯಕ್ಷರಾದ ಸದಾಶಿವ ಬಂಗೇರರಿಗೆ ಯುವವೇದಿಕೆಯಿಂದ ವತಿಯಿಂದ ಸನ್ಮಾನ ಮಾಡಲಾಯಿತು. ಇತ್ತೀಚೆಗೆ ನೋಟರಿಯಾಗಿ ಆಯ್ಕೆಯಾಗಿರುವ ನ್ಯಾಯವಾದಿ ಕುಶಾಲಪ್ಪ ಕುಲಾಲ್ ಅವರನ್ನು ಕೇಂದ್ರ ಸಮಿತಿಯ ಸಭೆಯಲ್ಲಿ ಸನ್ಮಾನಿಸಲಾಯಿತು.
ಕೇಂದ್ರ ಸಮಿತಿಯ ಸಭೆ ತೀರ್ಮಾನ
ಇಂದು ನಡೆದ ಕರಾವಳಿ ಕುಲಾಲ/ಕುಂಬಾರರ ಯುವವೇದಿಕೆಯ ಕೇಂದ್ರ ಸಮಿತಿಯ ಸಭೆಯ ಪ್ರಮುಖ ತೀರ್ಮಾನಗಳು
1. ಮುಂಬರುವ ಸರ್ವಜ್ಞ ಟ್ರೋಫಿ-2018ನ್ನು ಬೆಳ್ತಂಗಡಿ ಆಯೋಜಿಸಲು ಅನುಮೋದನೆ ನೀಡಲಾಯಿತು.
2. ಉಡುಪಿಯಲ್ಲಿ ವರ್ಷದ ಕೊನೆಯಲ್ಲಿ ರಾಜ್ಯ ಕುಂಬಾರರ ಮಹಾಸಂಘ ,ರಾಜ್ಯ ಕುಂಬಾರರ ಮಹಾಸಂಘ ಉಡುಪಿ ವಿಭಾಗ ,ಕರಾವಳಿ ಕುಲಾಲ ಕುಂಬಾರ ಒಕ್ಕೂಟ ಉಡುಪಿ ಹಾಗು ಕರಾವಳಿ ಕುಲಾಲ ಕುಂಬಾರ ಯುವವೇದಿಕೆಯ ಕೇಂದ್ರಸಮಿತಿಯ ಸಂಯುಕ್ತ ಆಶ್ರಯದಲ್ಲಿ ಜರುಗಲಿರುವ ವಿಶ್ವ ಕುಂಬಾರ ಸಮ್ಮೇಳನಕ್ಕೆ ಎಲ್ಲಾ ರೀತಿಯಲ್ಲೂ ಸಂಪೂರ್ಣ ಸಹಕಾರ ಕೊಡಲು ತೀರ್ಮಾನಿಸಲಾಯಿತು.
3.ವರ್ಷಾಂತ್ಯದಲ್ಲಿ ಕೇಂದ್ರ ಸಮಿತಿ ಹಾಗು ಕುಲಾಲ ಯುವವೇದಿಕೆ ಬಂಟ್ವಾಳದ ಆಶ್ರಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕುಂಭ ಕಬಡ್ಡಿಗೆ ಸಂಪೂರ್ಣ ಸಹಕಾರ ಕೊಡಲು ತೀರ್ಮಾನಿಸಲಾಯಿತು.
4. ಮೇಲಿನ ಎಲ್ಲಾ ಕಾರ್ಯಕ್ರಮ ಗಳ ಮೂಲಕ ಕುಲಾಲ ಕುಂಬಾರ ಸಮುದಾಯಕ್ಕೆ ಸಾಮಾಜಿಕ ಹಾಗು ರಾಜಕೀಯ ನ್ಯಾಯ ಹಾಗು ಮನ್ನಣೆ ಕೊಡಿಸಲು ರಾಜಕೀಯ ನಾಯಕರುಗಳಿಗೆ ಹಾಗು ಪಕ್ಷಗಳಿಗೆ ಹಕ್ಕೊತ್ತಾಯ ಮಾಡಲು ತೀರ್ಮಾನಿಸಲಾಯಿತು.