ಮಂಗಳೂರು(ಏ.೨೨): ಕುಲಾಲ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಭಯೋತ್ಪಾದಕರಿಂದ ದಾಳಿಗೊಳಗಾಗಿ ಸಾವು ಗೆದ್ದು ಬಂದ ವೀರ ಯೋಧ ಸಂತೋಷ್ ಕುಲಾಲ್ ಮತ್ತು ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಏ.೨೨ರಂದು ಮಧ್ಯಾಹ್ನ ಸಂತೋಷ್ ಅವರ ನಿವಾಸಕ್ಕೆ ತೆರಳಿದ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು, ಸುರತ್ಕಲ್ ಕುಲಾಲ ಸಂಘ , ಪರಂಗಿಪೇಟೆ ಕುಲಾಲ ಸಂಘ ,ಕುಲಾಲ ಮಹಿಳಾ ಮಂಡಲ , ಕುಲಾಲ-ಕುಂಬಾರ ಒಕ್ಕೂಟ ,ಶ್ರೀದೇವಿ ದೇವಸ್ಥಾನ ಮಂಗಳೂರು ,ಮುಡಿಪು ಕುಲಾಲ ಸಂಘ ,ಉಳ್ಳಾಲ ಕುಲಾಲ ಕುಂಬಾರ ಯುವವೇದಿಕೆಯ ನಾಯಕರು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಸಂತೋಷ್ ಅವರಿಗೆ ಸನ್ಮಾನಿಸುವ ಮೂಲಕ ಆತ್ಮವಿಶ್ವಾಸ ತುಂಬಿದರು.
ಈ ಸಂದರ್ಭ ವಿವಿಧ ಸಂಘಗಳ ಪ್ರಮುಖ ನಾಯಕರಾದ ಸುಜೀರ್ ಕುಡುಪು, ಶ್ರೀನಿವಾಸ್ ಅತ್ತಾವರ, ಮಮತಾ ಅಣ್ಣಯ್ಯ ಕುಲಾಲ್, ಶ್ರೀನಿವಾಸ್ ಪಡೀಲ್ , ನಾರಾಯಣ ಬಂಗೇರ ,ಶಕುಂತಲ ನಾರಾಯಣ ,ರೂಪಾ .ಡಿ. ಬಂಗೇರ, ಪ್ರಸಾದ್ ಸಿದ್ದಕಟ್ಟೆ , ಸುಧಾಕರ್ ಸಾಲ್ಯಾನ್ , ನವೀನ ಕುಲಾಲ್, ಜಯ ಕುಲಾಲ್, ಜಯಂತ ಬಗಲ್ಪಾಡಿ, ಗೋಪಾಲ ಬಂಗೇರ, ರೇಷ್ಮಾ ಕೊಲ್ಲಾರ ಮಜಲು ,ಸತೀಶ್ ಮಂಜನಾಡಿ ,ಶಶಿಕಲಾ ಮಂಜನಾಡಿ ,ತನಿಯಪ್ಪ ಮೂಲ್ಯ, ಕೆ.ವಿ ಜಯರಾಮ್ ಮಂಗಳೂರು ಮೊದಲಾದ ಗಣ್ಯರು ಜೊತೆಯಲ್ಲಿದ್ದರು.