ಮಂಗಳೂರು(ಏ.೨೨): ಭಯೋತ್ಪಾದಕರೊಂದಿಗೆ ಹೋರಾಡಿ ಸಾವಿನ ದವಡೆಯಿಂದ ಪಾರಾಗಿ ಬಂದ ಕುಲಾಲ ಸಮಾಜದ ಹೆಮ್ಮೆಯ ಯೋಧ ಮುಡಿಪು ಸಂತೋಷ್ ಕುಲಾಲ್ ಅವರ ಮನೆಗೆ ಏಪ್ರಿಲ್ 22ರಂದು `ಕುಲಾಲ್ ವರ್ಲ್ಡ್’ ಬಳಗವು ಭೇಟಿ ನೀಡಿ ಅಭಿನಂದಿಸಿತು.
ದೇಶದ ಗಡಿ ಭಾಗದಲ್ಲಿ ಉಗ್ರರ ಉಪಟಳ, ಪ್ರತಿಕೂಲ ಹವಾ ಮಾನದಲ್ಲಿ ದೇಶ ಕಾಯುವ ಕಾರ್ಯ ಸವಾಲಿನದ್ದಾಗಿದ್ದು, ಇಂತಹ ಸಂದರ್ಭದಲ್ಲಿ ಉಗ್ರರನ್ನು ಸದೆಬಡಿದು ದಿಟ್ಟತನ ಮೆರೆದ ಸಂತೋಷ್ ಅವರನ್ನು ಶಾಲು ಹೊದೆಸಿ, ಪೇಟ ತೊಡಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಉಗ್ರರ ಗುಂಡೇಟಿನಿಂದ ಗಾಯಗೊಂಡಿರುವ ಸಂತೋಷ್ ಅವರು ಬೇಗನೆ ಗುಣ ಮುಖರಾಗಲೆಂದು ಈ ಸಂದರ್ಭ ಹಾರೈಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು `ನಾನು ಕೂಡಾ ಕುಲಾಲ್ ವರ್ಲ್ಡ್ ಡಾಟ್ ಕಾಮ್ ನ ನಿತ್ಯ ಓದುಗನಾಗಿದ್ದು, ನಮ್ಮ ಸಮುದಾಯಕ್ಕೆ ಸಂಬಂಧಿಸಿದ ಉತ್ತಮ ವರದಿಗಳು ವೆಬ್ ಸೈಟಿನಲ್ಲಿ ಮೂಡಿಬರುತ್ತಿದೆ. ಅದೇ ರೀತಿ ಬಡವರ, ಅಸಹಾಯಕರಿಗೆ ನೆರವು ನೀಡುತ್ತಿರುವ ಈ ಬಳಗದ ಸೇವೆಯೂ ಶ್ಲಾಘನೀಯವಾಗಿದ್ದು, ಉತ್ತಮ ಕಾರ್ಯಕ್ಕೆ ನಾನೂ ನಿಮ್ಮ ಜೊತೆ ಕೈಜೋಡಿಸುತ್ತೇನೆ. ನಿಮ್ಮ ಬಳಗದ ಸೇವಾ ಚಟುವಟಿಕೆಗಳು ನಿರಂತರವಾಗಿರಲಿ’ ಎಂದು ಶುಭ ಹಾರೈಸಿ, ಸನ್ಮಾನಿಸಿದ್ದಕ್ಕೆ ಧನ್ಯವಾದ ತಿಳಿಸಿದರು.
ಈ ವೇಳೆ `ಕುಲಾಲ್ ವರ್ಲ್ಡ್’ ವಾಟ್ಸಪ್ ಬಳಗದ ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದ್ರೆ, ನರೇಶ್ ಕೆ.ಟಿ. ಬೆಳ್ತಂಗಡಿ ಸದಸ್ಯರಾದ ಅರುಣ್ ಕುಲಾಲ್ ಮೂಳೂರು, ರಮೇಶ್ ಕುಲಾಲ್ ವಗ್ಗ , ಸಂತೋಷ್ ಕುಲಾಲ್ ಪದವು, `ಕುಲಾಲ್ ವರ್ಲ್ಡ್’ ಮಹಿಳಾ ವಾಟ್ಸಪ್ ಗ್ರೂಪ್ ಸದಸ್ಯೆ ಶ್ವೇತಾ ಧನಂಜಯ್ ಕುಲಾಲ್ ಉಪಸ್ಥಿತರಿದ್ದರು.