ಉಡುಪಿ(ಏ.೧೬): ತನ್ನ ಎರಡೂ ಕಿಡ್ನಿ ವೈಫಲ್ಯಕ್ಕೀಡಾಗಿ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದ ಪರ್ಕಳ ಸಮೀಪದ ನಿವಾಸಿ ದಯಾನಂದ ಕುಲಾಲರ ಚಿಕಿತ್ಸೆಗೆ ಕಾಪು ಕುಲಾಲ ಯುವವೇದಿಕೆಯು ಆಸರೆಯಾಗಿದ್ದು, ತಾವು ದಾನಿಗಳಿಂದ ಸಂಗ್ರಹಿಸಿದ 26,500 ರೂಪಾಯಿಯನ್ನು ಏ.೧೬ರಂದು ದಯಾನಂದ ಕುಲಾಲರಿಗೆ ಹಸ್ತಾ೦ತರಿಸಿದೆ.
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ದಯಾನಂದ ಅವರು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು ಪ್ರತಿ ವಾರ ಎರಡು ಡಯಾಲಿಸಿಗೆ ಒಳಪಡಬೇಕಾದ ದಯನೀಯ ಪರಿಸ್ಥಿಯ ಬಗ್ಗೆ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿದ್ದು, ಇದಕ್ಕೆ ಸ್ಪಂದಿಸಿರುವ ಕಾಪು ಕುಲಾಲ ಯುವವೇದಿಕೆಯು ತಮ್ಮ ವಾಟ್ಸಪ್ ಬಳಗದಲ್ಲಿ ಹಣ ಸಹಾಯ ಮಾಡುವಂತೆ ಮನವಿ ಮಾಡಿತ್ತು. ಅವರ ನೋವಿಗೆ ಸ್ಪಂದಿಸಿ ಹಲವಾರು ಸಹೃದಯಿ ದಾನಿಗಳು ಸಹಾಯ ನೀಡಿದ್ದರು.
ಸಂಗ್ರಹವಾದ ಒಟ್ಟು ಹಣವನ್ನ ಕುಲಾಲ ಯುವ ವೇದಿಕೆಯ ಪದಾಧಿಕಾರಿಗಳ ಜತೆಗೂಡಿ ಇಂದು ಅವರ ಮನೆಗೆ ತೆರಳಿ ನೀಡಲಾಯಿತು. ಈ ಸಂದರ್ಭ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಲಾಲ್ ಕಡಿಯಾಳಿ, ರಾಜ್ಯ ಕುಂಬಾರರ ಮಹಾಸಂಘ ಬೆಂಗಳೂರು ಇದರ ಉಡುಪಿ ಜಿಲ್ಲಾ ಅಧ್ಯಕ್ಷರಾದ ಸುನಿಲ್ .ಎಸ್. ಮೂಲ್ಯ, ಕಾಪು ಕುಲಾಲ ಯುವ ವೇದಿಕೆಯ ಅಧ್ಯಕ್ಷ ಉದಯ ಕುಲಾಲ್ ಕಳತ್ತೂರು ಉಪಸ್ಥಿತರಿದ್ದರು. ಆಪತ್ಕಾಲದಲ್ಲಿ ಸಹಾಯ ನೀಡಿದ ಎಲ್ಲಾ ದಾನಿಗಳಿಗೂ ಕಾಪು ಕುಲಾಲ ಯುವ ವೇದಿಕೆಯು ಧನ್ಯವಾದ ಸಮರ್ಪಿಸಿದೆ.
ದಯಾನಂದ ಕುಲಾಲರ ಚಿಕಿತ್ಸೆಗೆ ಇನ್ನೂ ಧನಸಹಾಯದ ಅಗತ್ಯವಿದ್ದು ದಾನಿಗಳು ಈ ಕೆಳಗೆ ನೀಡಿರುವ ಖಾತೆಗೆ ಹಣ ಜಮಾ ಮಾಡಬಹುದು.
.
Dayananda kulal
State Bank of India
Parkala Branch
Udupi Dist.
Account No.-34623825081
Ifsc code-SB 1NOO16869