ಮಂಗಳೂರು: ಉರ್ವ ಪೋಲಿಸ್ ಠಾಣೆಯ ಎಎಸ್ ಐ ಐತಪ್ಪ ಎಂಬವರ ಮೇಲೆ ಬುಧವಾರ ಬೆಳಗ್ಗಿನ ಜಾವ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಐತಪ್ಪರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಬೆಳಗ್ಗಿನ ಜಾವ ನಗರದ ಲೇಡಿಹಿಲ್ ಸರ್ಕಲ್ ಬಳಿ ಕರ್ತವ್ಯನಿರತರಾಗಿದ್ದ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ನಗರ ಪೋಲಿಸ್ ಕಮೀಷನರ್ ಚಂದ್ರಶೇಖರ್, ಡಿಸಿಪಿ ಶಾಂತರಾಜ್, ಡಾ ಸಂಜೀವ್ ಪಾಟೀಲ್ ಹಾಗೂ ಇತರರು ಭೇಟಿ ನೀಡಿದ್ದು ಪ್ರಕರಣದ ಕುರಿತು ಎಸಿಪಿ ಉದಯ್ ನಾಯಕ್ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಶಮೀರ್ ಕಾಟಿಪಳ್ಳ ಮತ್ತು ನಿಯಾಜ್ ಬಂಧಿತರು.
ತನಿಖೆಗೆ ಕುಲಾಲ ವೇದಿಕೆ ಆಗ್ರಹ
ಕರ್ತವ್ಯ ಪರತೆ, ನ್ಯಾಯ ನಿಷ್ಠೆಯಿಂದ ಕೆಲಸ ಮಾಡುವ ಎಯಸ್ ಐ ಐತಪ್ಪ ಮೂಲ್ಯರು ಕರ್ತವ್ಯದಲ್ಲಿ ಇರುವಾಗಲೇ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದನ್ನು, ಅವರ ಕೊಲೆಗೆ ಸಂಚು ನಡೆಸಿದ್ದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈ ರೀತಿಯಲ್ಲಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಹಾಗೂ ಉಡುಪಿ ಯಲ್ಲಿ ಜಿಲ್ಲಾ ಆಡಳಿತ ನಡೆಸುವ ಜಿಲ್ಲಾಧಿಕಾರಿಯ ಮೇಲೆ ಆಗುವ ದಾಳಿಗಳು ಸರಕಾರದ ಉದಾಸೀನತೆಯನ್ನ ಎತ್ತಿ ತೋರಿಸುತ್ತದೆ. ಸರಕಾರ ಸೂಕ್ತವಾಗಿ ಸ್ಪಂದಿಸಿ ಕೃತ್ಯ ನಡೆಸಿದವರನ್ನ ಶಿಕ್ಷಿಸಿ ಜನ ಸಾಮಾನ್ಯರಲ್ಲಿ ಭದ್ರತೆಯ ಭಾವನೆಯನ್ನ ಮೂಡಿಸಬೇಕು. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇದರ ಜವಾಬ್ದಾರಿ ಹೊರಬೇಕು.
*ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ ಬೆಂಗಳೂರು
*ಕರಾವಳಿ ಕುಲಾಲ/ಕುಂಬಾರ ಯುವ ವೇದಿಕೆ
*ಕರಾವಳಿ ಕುಲಾಲ/ ಕುಂಬಾರ ಒಕ್ಕೂಟ