ಉಡುಪಿ(ಏ.೦೪): ಅದೊಂದು ಸುಖಿ ಸಂಸಾರ. ಮೂರು ಹೊತ್ತಿನ ಬಾಳ ಬುತ್ತಿಗೆ ಆಸರೆಯಾಗಿದ್ದ ರಿಕ್ಷಾ ಚಾಲನೆ ಆ ಪುಟ್ಟ ಸಂಸಾರದ ಆದಾಯದ ಮೂಲರಥ ಆಗಿತ್ತು. ಇದ್ದದ್ದರಲ್ಲೇ ಸುಖ ಪಡುತ್ತಾ, ದುಡಿದಿದ್ದನ್ನ ಹಂಚಿ ತಿನ್ನುತ್ತಾ, ನೆರೆಕೆರೆಯವರಿಗೆ ತನ್ನ ಕೈಲಾದ ಸಹಾಯ ಮಾಡುತ್ತಾ ತಾನಾಯ್ತು ತನ್ನ ಕೆಲಸವಾಯ್ತು ಎಂದು ನಂಬಿ ಬದುಕುತ್ತಿತ್ತು ಆ ಪುಟ್ಟ ಸಂಸಾರ. ಮನೆತುಂಬಾ ಓಡಾಡಿಕೊಂಡು ಚೂಟಿಯಾಗಿ ಶಾಲೆಗೆ ಹೋಗಿ ಬರುತ್ತಿದ್ದ ಮಗಳ ಅಂದ ಚಂದ ನೋಡುತ್ತಾ ಖುಷಿ ಖುಷಿಯಾಗಿ ಸಾಗುತ್ತಿತ್ತು ಆ ಪುಟ್ಟ ಕುಟುಂಬದ ಬಾಳ ನೌಕೆ.
ಆ ಕ್ರೂರ ವಿಧಿಗೆ ಈ ಪುಟ್ಟ ಸಂಸಾರದ ಖುಷಿಯನ್ನು ನೋಡಿ ಹೊಟ್ಟೆ ಕಿಚ್ಚಾಯಿತೇನೋ..! ಆ ಪುಟ್ಟ ಸಂಸಾರದ ಆಧಾರಸ್ತಂಭವಾಗಿದ್ದ ಯಜಮಾನನನ್ನು `ಕಿಡ್ನಿ ವೈಫಲ್ಯ’ ಎಂಬ ಮಾರಣಾಂತಿಕ ಖಾಯಿಲೆಗೆ ನೂಕಿಬಿಟ್ಟಿತು. ಇದೀಗ ಇಡೀ ಸಂಸಾರ ದಿನ ಬೆಳಗಾದರೆ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಎದುರಾಗಿದೆ. ಹೌದು, ಎರಡೂ ಮೂತ್ರಪಿಂಡ ನಿಷ್ಕ್ರೀಯತೆಯಿಂದ ಯಮಯಾತನೆ ಅನುಭವಿಸುತ್ತಿರುವ ಮಣಿಪಾಲ ಸಮೀಪದ ಪರ್ಕಳ ದಯಾನಂದ ಕುಲಾಲ್ ಅವರ ಕಣ್ಣೀರಿನ ಕಥೆ ಇದು.
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿ ಪತ್ನಿ ಮತ್ತು ಪುಟ್ಟ ಮಗಳೂಂದಿಗೆ ನೆಮ್ಮದಿಯಲಿದ್ದ ದಯಾನಂದ ಕುಲಾಲ್ ಅವರಿಗೆ ಕೆಲ ತಿಂಗಳೀಚೆ ಆರೋಗ್ಯ ಸಮಸ್ಯೆ ತೀವ್ರವಾಗಿ ಬಾಧಿಸಿತು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದಾಗ ಅವರ ಎರಡು ಕಿಡ್ನಿ ಸಂಪೂರ್ಣ ವೈಪಲ್ಯವಾಗಿರುವುದು ತಿಳಿದು ಬಂತು. ಮೊದಲೇ ಗುಣಪಡಿಸಬಹುದಾಗಿದ್ದ ಆರಂಭದ ಐದು ಹಂತಗಳನ್ನು ಮೀರಿ ಸಂಪೂರ್ಣ ಕೆಟ್ಟು ನಿಂತಿರುವ ಮೂತ್ರಪಿಂಡ ತನ್ನ ಕೆಲಸವನ್ನು ನಿಲ್ಲಿಸುವ ಹಂತ ತಲುಪುತ್ತಿದೆ.
ದಯಾನಂದ ಕುಲಾಲರ ಆರೋಗ್ಯ ಸುಧಾರಣೆಗೆ ‘ಕಿಡ್ನಿ ಡಯಾಲಿಸಿಸ್’ ಒಂದೇ ಸದ್ಯಕ್ಕಿರುವ ಪರಿಹಾರ. ಆದರೆ ಡಯಾಲಿಸಿಸ್ ಅನ್ನುವುದು ತುಂಬಾ ದುಬಾರಿ ಚಿಕಿತ್ಸೆಯಾಗಿದ್ದು ವಾರಕ್ಕೆ ಕನಿಷ್ಟ ಎರಡು ಬಾರಿಯಾದರೂ ಡಯಾಲಿಸಿಸ್ ಗೆ ಒಳಗಾಗಬೇಕಾದ ಅನಿವಾರ್ಯತೆ ದಯಾನಂದ ಕುಲಾಲರಿಗೆ ಇದೀಗ ಸೃಷ್ಟಿಯಾಗಿದೆ. ಕುಟುಂಬದ ಆಧಾರ ಸ್ತಂಭವಾಗಿದ್ದ ಯಜಮಾನ ಈ ಖಾಯಿಲೆಗೆ ತುತ್ತಾಗಿದ್ದು ಮುಗ್ದತೆಯೇ ಮೈವೆತ್ತ ಪತ್ನಿಯ ಕಣ್ಣೀರು, ಮುದ್ದು ಕಂದಮ್ಮಳ ಮುಗ್ಧತೆ ಎಂತಹವರ ಕಲ್ಲು ಹೃದಯವನ್ನು ಕರಗಿಸುತ್ತದೆ.
ಈ ಪುಟ್ಟ ಸಂಸಾರ ಇದೀಗ ಈ ಸಮಾಜದ ನಮ್ಮೆಲ್ಲರಿಂದ ಆರ್ಥಿಕ ಸಹಕಾರವನ್ನು ಬಯಸುತ್ತಿದೆ. ಸಂಘ-ಸಂಸ್ಥೆಗಳು, ಸಮುದಾಯದ ದಾನಿಗಳು ಈ ಬಡ ಕುಟುಂಬಕ್ಕೆ ಆಸರೆಯಾಗಿ ಇದೀಗ ನಿಲ್ಲಬೇಕಿದೆ. ಈ ಬಡ ಕುಟುಂಬಕ್ಕೆ ನಿಮ್ಮ ದುಡಿಮೆಯ ಕಿಂಚಿತ್ ಹಣನೀಡಿ. ಆ ಕಿಂಚಿತ್ ಹಣಗಳೇ ಒಟ್ಟು ಸೇರಿ ದೊಡ್ಡ ಮೊತ್ತ ಆದೀತು. ಕಣ್ಣೀರಿನಲ್ಲೆ ಕೈ ತೊಳೆಯುತ್ತಿರುವ ಈ ಬಡ ಕುಟುಂಬಕ್ಕೆ ಆಸರೆಯಾಗೋಣ ಬನ್ನಿ.
ದಯಾನಂದ ಕುಲಾಲ್ ಅವರ ಬ್ಯಾಂಕ್ ಅಕೌಂಟ್ ಮಾಹಿತಿ ಹೀಗಿದೆ:
Dayananda kulal
State Bank of India
Parkala Branch
Udupi Dist.
Account num-34623825081
Ifsc code-SB 1NOO16869
Adress-7/133
Sannakki bettu post
Parkala Herga, Udupi Dist.
ಈ ಬಗೆಗಿನ ಯಾವುದೇ ಮಾಹಿತಿಗೆ ಕಾಪು ವಿಧಾನ ಸಭಾ ಕ್ಷೇತ್ರದ ಕುಲಾಲ ಯುವ ವೇದಿಕೆಯ ಅಧ್ಯಕ್ಷ ಉದಯ್ ಕುಲಾಲ್ ಕಳತ್ತೂರು: 9844344253
ಅಥವಾ ರಾಜ್ಯ ಕುಂಬಾರರ ಮಹಾ ಸಂಘ ಬೆಂಗಳೂರು ಇದರ ಉಡುಪಿ ಜಿಲ್ಲಾಧ್ಯಕ್ಷರಾದ ಸುನಿಲ್ ಎಸ್ ಮೂಲ್ಯ:8095996563 ಅವರನ್ನು ಸಂಪರ್ಕಿಸಬಹುದು.