ಕಾರ್ಕಳ(ಏ.೦೩): ಪಾರ್ಶ್ವವಾಯು ಪೀಡಿತರಾಗಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಕೌಡೂರಿನ ಭೋಜ ಕುಲಾಲರಿಗೆ `ಕುಲಾಲ ಚಾವಡಿ’ ವಾಟ್ಸಾಪ್ ಗ್ರೂಪಿನಿಂದ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ಮಾಡಲಾಯಿತು.
ವಾಟ್ಸಪ್ ಅನ್ನುವ ಸಾಮಾಜಿಕ ಜಾಲತಾಣದ ಮೂಲಕ ಸಮಾಜ ಸೇವೆ ಮಾಡುತ್ತಾ ನೊಂದವರ ಬಾಳಿಗೆ ಆಶಾಕಿರಣವಾಗಿವಾಗಿರುವ `ಕುಲಾಲ ಚಾವಡಿ’ ಗ್ರೂಪಿನ ಸದಸ್ಯರಿಂದ ಸಂಗ್ರಹಿಸಿದಂತಹ ಒಟ್ಟು ದೇಣಿಗೆಯನ್ನು ಕಾರ್ಕಳದ ನಿಟ್ಟೆ ಗಾಜ್ರೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭೋಜ ಕುಲಾಲರಿಗೆ ಹಸ್ತಾ೦ತರಿಸಲಾಯಿತು. ಸುರೇಶ್ ರಂಗನಪಲ್ಕೆ ಹಣ ಸಂಗ್ರಹದ ಜವಾಬ್ದಾರಿ ಹೊತ್ತಿದ್ದರು. ಗಂಡು ಮಕ್ಕಳಿಲ್ಲದೆ ಒಬ್ಬ ಮಗಳನ್ನು ಹೊಂದಿರುವ ಭೋಜ ಕುಲಾಲರು ಸಂಸಾರಕ್ಕೆ ಆಸರೆಯಾಗಿದ್ದು, ಇತ್ತೀಚೆಗೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದು, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು.
ಹಣ ನೀಡಿದ ವೇಳೆ ಕುಲಾಲ ಛಾವಡಿ ವಾಟ್ಸಪ್ ಗ್ರೂಪ್ ನ ಸಂತೋಷ್ ಕುಲಾಲ್ ಪದವು, ಸುರೇಶ್ ಕುಲಾಲ್ ರಂಗನಪಲ್ಕೆ, ಸತೀಶ್ ಕಜ್ಜೋಡಿ, ವಿಜೇಶ್ ಕುಲಾಲ್ ಸಾಣೂರು, ಸಂದೀಪ್ ಕುಲಾಲ್ ಪಳ್ಳಿ, ಉಪಸ್ಥಿತರಿದ್ದರು.
`ಕುಲಾಲ ಚಾವಡಿ’ ವಾಟ್ಸಾಪ್ ಮಿತ್ರರಿಂದ ಆರ್ಥಿಕ ನೆರವು
Kulal news
1 Min Read