ಬೆಂಗಳೂರು(ಮಾ.೩೦): ಖ್ಯಾತ ಸಮಾಜ ಸೇವಕ ಪುರುಷೋತ್ತಮ ಚೆಂಡ್ಲಾ ಅವರಿಗೆ 2017ನೇ ಸಾಲಿನ `ಕರ್ನಾಟಕ ಕಲಾಸಂಪದ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಯಕ್ಷಗಾನ ಸಂಘಟಕ ದಿವಂಗತ ಕರ್ನೂರು ಕೊರಗಪ್ಪ ರೈ ಅವರ ಸ್ಮರಣಾರ್ಥ ಕರ್ನಾಟಕ ಕಲಾ ಸಂಪದ ಸಂಸ್ಥೆ ವತಿಯಿಂದ ನೀಡಲಾಗುವ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆದ `ಕರ್ನೂರು ಒಂದು ನೆನೆಪು’ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ ಯಲ್ಲಿ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಮೂಲತಃ ಮಂಜೇಶ್ವರ ವರ್ಕಾಡಿಯವರಾದ ಪುರುಷೋತ್ತಮ ಚೆಂಡ್ಲಾ ಅವರು ಬೆಂಗಳೂರಿನ ಯಶಸ್ವಿ ಉದ್ಯಮಿಯಾಗಿದ್ದಾರೆ. ಬೆಂಗಳೂರಿನ `ತುಳುವೆರೆ ಚಾವಡಿ’ಯ ಸಂಸ್ಥಾಪಕರಾಗಿದ್ದು, ಆ ಮೂಲಕ ತುಳು ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ದುಡಿಯುತ್ತಿದ್ದಾರೆ. ಸೃಷ್ಟಿ ಕಲಾ ಭೂಮಿ, ಕರ್ನಾಟಕ ಕಲಾ ಸಂಪದದ ಮಾರ್ಗದರ್ಶಕರಾಗಿ, ಬೆಂಗಳೂರಿನ ಕುಲಾಲ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಚೆಂಡ್ಲಾ ಅವರು ಇತರ ಹಲವಾರು ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ.