ಮಂಗಳೂರು(ಮಾ.೧೫): ಸಂತ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿ ಕು. ಪ್ರಥ್ವಿ ಅವರಿಗೆ ಕಾಲೇಜಿನ ಕನ್ನಡ ರಂಗಭೂಮಿ ವತಿಯಿಂದ ನೀಡಲಾಗುವ 2016-17ನೇ ಸಾಲಿನ `ಆಕರಂ ಪ್ರಶಸ್ತಿ’ ಲಭಿಸಿದೆ.
ಈ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯಾಗಿರುವ ಪ್ರಥ್ವಿ ಅವರು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೈಸೂರು, ವಿಜಯಪುರ ಮುಂತಾದ ಕಡೆ ಆಯೋಜಿಸಲಾದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿ ಪ್ರಮಾಣಪತ್ರ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ `ಆಕರಂ ಪ್ರಶಸ್ತಿ’ ನೀಡಲಾಗಿದೆ. ಪ್ರಥ್ವಿ ಅವರು ಕುತ್ತಾರು ಪದ್ಮನಾಭ ಕುಲಾಲ್- ವಿಶಾಲ ದಂಪತಿಯ ಸುಪುತ್ರಿ.
ಕುI ಪ್ರಥ್ವಿ ಅವರಿಗೆ `ಆಕರಂ ಪ್ರಶಸ್ತಿ’
Students corner
1 Min Read


