ಏನು ಅಸೆಯ ಹೊತ್ತು
ಬಂದೆ ನೀನು ಚಿನ್ನ
ಗುಳಿಕೆನ್ನೆಯ ನಗುವ
ನೋಟದಲೆ ಸೆಳೆವ ಕಣ್ಣ
ಯಾರು ಕೊಟ್ಟರು ನಿನಗೆ
ಹೃದಯ ಪ್ರೀತಿ ಬಣ್ಣ
ಸಿಗದ ಮನಸ ಹುಡುಕುತಿತ್ತು ಮನ
ಬಂದು ಬಿಟ್ಟಿಯಲ್ಲ
ಮರುಭೂಮಿಲಿ
ಚಿಗುರ ಬೆಳೆಸಲು ಸುರಿದೆ
ಪ್ರೀತಿ ನೀರ ಕೊಡ-ಪಾನ
ಈಗಂತೂ ಖುಷಿ
ತುಂಬಿದ ಸವಾರಿ ಜೀವನ
ಒಂದು ಸಲ ತಿರುಗಿ
ಹಲವು ಸಲ ಮರುಗಿ
ಸಿಗದೇ ಹೋದರು ಮಾತು
ಮತ್ತೆ ಬಿದ್ದಿತು ಕನಸು
ನನಸು ಮಾಡುವ ಮನಸ
ಕದ್ದು ನಗುವೇ ಒಲವೇ ದೂರನಿಂತು!
ಬಿಡದೆ ಕಾಡುವ ನೋವ
ಮರೆತು ಚಿಗುರಿತು ಜೀವ
ನಿತ್ಯ ಪೂಜೆಯ ಮಾಡಿ
ಸಿಗುವ ಪ್ರೀತಿಯ ಮೋಡಿ
ಹಸಿದ ಕನಸಿಗೆ ಆಹಾರ
ನಗುವ ನೋಟಕೆ
ಮಾತಿನಾಟಕೆ
ಬಿದ್ದನಲ್ಲ ಈ.. ಪೋರ!
ಎನ್. ಕೆ. ಕುಲಾಲ್, ಬೇಕೂರು