ಕಾರ್ಕಳ(ಮಾ.೧೦): ಇಲ್ಲಿನ ಕುಲಾಲ ಸುಧಾರಕ ಸಂಘದ ನೂತನ ಸಭಾಭವನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕ್ರೀಡೋತ್ಸವವು ಏಪ್ರಿಲ್ 16ರಂದು ಬೆಳಿಗ್ಗೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ. ಕ್ರೀಡೋತ್ಸವದಲ್ಲಿ ಪುರುಷರ ವಾಲಿಬಾಲ್ ಪಂದ್ಯಾಟ, ಹಗ್ಗಜಗ್ಗಾಟ, 400 ಮೀ ಓಟ, 200ಮೀ ಓಟ, ಶಾಟ್ ಪುಟ್ ಪಂದ್ಯ ಆಯೋಜಿಸಲಾಗಿದ್ದರೆ, ಮಹಿಳೆಯರಿಗಾಗಿ ತ್ರೋ ಬಾಲ್, ಹಗ್ಗಜಗ್ಗಾಟ, 200ಮೀ ಓಟ, ಶಾಟ್ ಪುಟ್, ಸಂಗೀತ ಕುರ್ಚಿ, ಲಿಂಬು-ಚಮಚ ಸ್ಪರ್ಧೆಗಳು ನಡೆಯಲಿದೆ.
ಮಕ್ಕಳಿಗಾಗಿ ಕೆರೆದಡ, ಕಪ್ಪೆ ಜಿಗಿತ, ಬಾಲ್ ಎಸೆತ, 100ಮೀ. ಓಟ, ಉದ್ದ ಜಿಗಿತ, ಶಾಟ್ ಪುಟ್, ಗೋಣಿಚೀಲ ಓಟ, ರಿಂಗ್ ಎಸೆತ ಮತ್ತಿತರ ಸ್ಪರ್ಧೆಗಳು ನಡೆಯಲಿದೆ. ವಾಲಿಬಾಲ್, ತ್ರೋ ಬಾಲ್ ಮತ್ತು ಹಗ್ಗಜಗ್ಗಾಟದಲ್ಲಿ ಭಾಗವಹಿಸುವ ತಂಡಗಳು ಮಾರ್ಚ್ 30ರೊಳಗೆ ಹೆಸರು ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗೆ ದಿವಾಕರ ಬಂಗೇರ :9880197475, ಉದಯ ಕುಲಾಲ್ : 9611758464 ನಂಬರನ್ನು ಸಂಪರ್ಕಿಸಬಹುದು.


