ಸಂತ ನಾಮದೇವನಿಗೆ ಸತ್ಯದ ಜ್ಞಾನವಾಗಿಲ್ಲ ಎಂಬುವದನ್ನು ಅವನ ಇಷ್ಟದೇವನಾದ ವಿಠೋಬನಿಗೆ ತಿಳಿಯಿತು. ಈ ವಿಷಯವನ್ನು ಜ್ಞಾನೇಶ್ವರರಿಗೆ ತಿಳಿಸಿದನು. ಜ್ಞಾನೇಶ್ವರರು ನಾಮದೇವನನ್ನು ಪರಿವರ್ತನೆ ಮಾಡುವದಕ್ಕೆ ಒಂದು ಯೋಜನೆ ಮಾಡಿದನು. ಆ ಯೋಜನೆಯನ್ನು ವಿಠೋಬನ ಭಕ್ತನಾದ ಗೋರ ಕುಂಬಾರನಿಗೆ ತನ್ನ ಉದ್ದೇಶವನ್ನು ಗುಪ್ತವಾಗಿ ತಿಳಿಸಿ ಹೇಳಿದನು.
ನಾಮದೇವರು ವಿವಿಧ ಸಂತರೊಂದಿಗೆ ತೀರ್ಥಯಾತ್ರೆ ಮಾಡಿ ಗೋರ ಕುಂಬಾರನ ಸ್ಥಳಕ್ಕೆ ಬಂದರು. ಇವರೆಲ್ಲರ ಸತ್ಕಾರ ಮಾಡುವ ಜವಾಬ್ದಾರಿ ಗೋರ ಕುಂಬಾರನಿಗೆ ಸೇರಿತ್ತು. ಜ್ಞಾನೇಶ್ವರರು ಆ ಸಭೆಯಲ್ಲಿ “ಗೋರಾ !ನೀನು ಹೇಗಿದ್ದರು ಕುಂಬಾರನಲ್ಲವೇ !ನೀನು ನಿತ್ಯವೂ ಮಡಿಕೆಗಳನ್ನು ಮಾಡಿ, ಅವುಗಳಲ್ಲಿ ಯಾವವು ಪಕ್ವವಾಗಿವೆ ಅಥವಾ ಇಲ್ಲವೋ ಎಂದು ಪರೀಕ್ಷೆ ಮಾಡುತ್ತಿರುತ್ತಿ. ನಿನ್ನೆದುರಿಗೆ ಕುಳಿತಿರುವ ಸಂತರೆಲ್ಲರೂ ಸೃಷ್ಟಿಕರ್ತನಾದ ಕುಲಾಲ(ಕುಂಬಾನ) ನ ಜೀವಂತ ಘಟಕಗಳು. ಇವುಗಳಲ್ಲಿ ಯಾವ ಘಟವು ಪಕ್ವವಾಗಿದೆ ಯಾವುದು ಪಕ್ವವಾಗಿಲ್ಲ ಎನ್ನುವದನ್ನು ಪರೀಕ್ಷೆ ಮಾಡಿ ಹೇಳಬೇಕು.
ಜ್ಞಾನೇಶ್ವರರ ಗುಪ್ತ ಸೂಚನೆಯಂತೆ ಗೋರಾ `ಆಗಲಿ ಸ್ವಾಮಿ! ಹಾಗೆ ಮಾಡುತ್ತೇನೆ’ ಎಂದು ಮಡಿಕೆಗಳನ್ನು ಬಾರಿಸಿ ನೋಡಲು ಬಳುಸುತ್ತಿದ್ದ ತಟ್ಟು ಮಗೆಯನ್ನು ತೆಗೆದುಕೊಂಡು, ತನ್ನ ಅಥಿತಿಗಳ ಹತ್ತಿರ ಹೋಗಿ ಪ್ರತಿಯೊಬ್ಬನ ತೆಲೆಗೂ ಆ `ಬ್ಯಾಟ್’ ನಂತಿದ್ದ ಹಲಿಗೆಯಿಂದ, ಮಡಿಕೆಗಳನ್ನು ಬಾರಿಸಿದಂತೆ, ಬಾರಿಸುತ್ತಾ ಹೋದನು. ಪ್ರತಿಯೊಬ್ಬ ಸಂತನೂ ಜ್ಞಾನೇಶ್ವರರ ಮಾತಿಗೆ ಗೌರವ ನೀಡಿ ಗೋರನ ಏಟಿಗೆ ವಿನಯದಿಂದ ತಲೆ ಬಾಗುತ್ತಿದ್ದರು. ಈ ರೀತಿ ಪರೀಕ್ಷೆ ಮಾಡುತ್ತಾ ನಾಮದೇವರ ಹತ್ತಿರ ಬಂದಾಗ ನಾಮದೇವರು ಕೋಪಗೊಂಡು ಚೀರಾಡಲು ಆರಂಭಿಸಿದರು.
ಜ್ಞಾನೇಶ್ವರರು ಹೇಳಿದಂತೆ ನಮ್ಮನ್ನು ಪರೀಕ್ಷಿಸುವ ಹಕ್ಕು ನಿನಗೆಲ್ಲಿದೆ. ನಮ್ಮನ್ನು ನೀನು ಸೇವೆ ಮಾಡುವರ ಮೂಲಕ ಸಂತೃಪ್ತಗೋಳಿಸಬೇಕು. ಅದನ್ನು ಬಿಟ್ಟು ಈ ರೀತಿ ನಮ್ಮನ್ನು ಅವಮಾನಿಸಬೇಡ ಎಂದನು. ಗೋರ ಜ್ಞಾನೇಶ್ವರರ ಕಡೆಗೆ ತಿರುಗಿ ಇಲ್ಲಿಯ ಎಲ್ಲಾ ಕುಂಭಗಳು ಪಕ್ವವಾಗಿವೆ ಆದರೆ ಕೊನೆ ಕುಂಭ ಮಾತ್ರ ಪಕ್ವವಾಗಿಲ್ಲ ಎಂದು ಹೇಳಿದನು. ಇವನ ಮಾತಿನಿಂದ ಎಲ್ಲಾ ಸಂತರು ಗೊಳ್ಳೆಂದು ನಕ್ಕರು. ಇದರಿಂದ ನಾಮದೇವರು ಸಿಟ್ಟುಗೊಂಡು ಸಭೆಯಿಂದ ಹೊರಗೆ ಹೋದರು. ಸೀದಾ ವಿಠೋಬನ ಹತ್ತಿರ ಬಂದನು. ವಿಠೋಬ ಹಾಗೂ ನಾಮದೇವರ ಮಧ್ಯ ತುಂಬಾ ಸಲುಗೆಯಿತ್ತು. ಸಭೆಯಲ್ಲಿ ತನಗಾದ ಅವಮಾನವನ್ನು ವಿಠೋಬನಿಗೆ ತಿಳಿಸಿದನು.
ಎಲ್ಲಾ ತಿಳಿದಿದ್ದ ವಿಠೋಬನು ಏನನ್ನೂ ತಿಳಿಯದಂತೆ ಅಲ್ಲಿಯ ನಡೆದ ವಿಚಾರವನ್ನು ಕೇಳಿಕೊಂಡ ನಂತರ ನಿನಗೆ ಅನ್ಯಯವಾಗಿದೆ. ನೀನೇನು ಸಾಮಾನ್ಯನೆ? ನಿನ್ನ ಯೊಗ್ಯತೆಯನ್ನು ಪಾಮರರು ಏನು ಬಲ್ಲರು? ನಿನಗೆ ಅವಮಾನ ಮಾಡಿದ ಅವರಿಗೆ ಯಾವ ನರಕ ಕಾದಿದಿಯೋ? ಅದೆಲ್ಲಾ ಇರಲಿ ನಿನ್ನಂತ ಮಹಾಪುರುಷನಿಗೆ ಮಾನವೂ ಒಂದೇ ಅವಮಾನವು ಒಂದೇ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳುವ ಸಣ್ಣ ವ್ಯಕ್ತಿಯೂ ನೀನಲ್ಲ. ಆ ಮೂರ್ಖ ಗೋರ ಎಲ್ಲಾ ಸಂತರಿಗೆ ತಲೆಗೆ ಹೊಡೆಯುವಾಗ ಅವರೆಲ್ಲರೂ ಹೇಗೆ ಸಹಿಸಿಕೊಂಡರು. ವಿಠೋಬನ ಈ ದ್ವಂದಾರ್ಥದ ಮಾತುಗಳಿಂದ ನಾಮದೇವ ಮತ್ತಷ್ಟು ಘಾಸಿಗೊಂಡ ನಿನ್ನ ಮಾತಿನ ಗೂಡಾರ್ಥವನ್ನು ಅರಿತುಕೊಳ್ಳುವಷ್ಟು ದಡ್ಡನಲ್ಲ. ಅಂತಾ ಸಭೆಯಲ್ಲಿ ಮರ್ಯಾದೆ ಕಳೆದುಕೊಂಡು ಹೇಗಿರಬೇಕು? ನನ್ನ-ನಿನ್ನ ಸಂಬಂಧ ಅವರಿಗೆ ಗೊತ್ತಿರಲಿಲ್ಲವೇ? ನೀನಾದರು ಈ ಭಕ್ತನನ್ನು ರಕ್ಷಣೆ ಮಾಡಬಹುದಾಗಿತ್ತು? ಆ ದುರಾಹಂಕಾರಿಯ ತಪ್ಪನ್ನ ತೋರಿಸಿದ್ದು ನನ್ನ ತಪ್ಪೇ? ಎಂದು ಅಳುತ್ತಾ ಕುಳಿತನು.
ಆಗ ವಿಠೋಬನು ನಿನ್ನ ಆತ್ಮವೆ ನಾನು. ನನ್ನ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದೀ ಎಂಬುದು ಗೊತ್ತು. ಆದರೆ ನಿನ್ನಲ್ಲಿ ಅಭಿಮಾನಲ್ಲಿ ಶೋಕಮೋಹಗಳು ತೊಲಗಿಲ್ಲ. ನೀನು ಯಾರು? ಮಾನಾಪಮಾನಗಳು ಯಾರಿಗೆ? ಇದೆಲ್ಲಾ ತಿಳಿದುಕೋಳ್ಳವ ಶಕ್ತಿ ನಿನಗಿಲ್ಲ. ನಾನು ತಿಳಿಸಿಕೊಟ್ಟರು ತಿಳಿಯುವ ಶಕ್ತಿ ನಿನಗೆ ಇಲ್ಲ. ಅದಕ್ಕಾಗಿ ಇಲ್ಲಿಂದ ದೂರದ ಕಾಡಿನಲ್ಲಿ ಒಬ್ಬ ಮಹಾತ್ಮನಿದ್ದಾನೆ ಅವನಲ್ಲಿ ಹೋಗಿ ತಿಳಿದುಕೊಂಡು ಬರಬೇಕು ಎಂದು ಆಜ್ಞೆ ಮಾಡಿದನು. ವಿಠೋಬನ ಆಜ್ಞೆಯಂತೆ ನಾಮದೇವನಿಗೆ ಮನಸ್ಸು ಇಲ್ಲದಿದ್ದರೂ ಕಾಡಿನ ಕಡೆಗೆ ಪ್ರಯಾಣ ಬೆಳೆಸಿದನು. ಕಾಡಿನ ಮಧ್ಯದಲ್ಲಿ ಒಂದು ಹಾಳು ಬಿದ್ದಿರುವ ದೇವಾಲಯದಲ್ಲಿ ಒಬ್ಬ ವ್ಯಕ್ತಿ ಶಿವಲಿಂಗದ ಮೇಲೆ ಕಾಲು ಇಟ್ಟುಕೊಂಡು ನಿದ್ರೆ ಮಾಡುತ್ತಿದ್ದನು. ವಿಠೋಬನು ಹೇಳಿದ ವ್ಯಕ್ತಿ ಇವನೇನಾ? ಎಂಬ ಪ್ರಶ್ನೆ ಬಂದಿತು. ಪರೀಕ್ಷೆ ಮಾಡೋಣ ಎಂದು ಅವರನ್ನು ಎಬ್ಬಿಸಿದನು. ನಾಮದೇವರನ್ನು ನೋಡಿ ವಿಠೋಬ ಕಳಿಸಿದ್ದಾನೆ ಎಂದನು.
ಹೌದು ಎಂದು ತೆಲೆಯಾಡಿಸಿ ಒಂದು ಮೂಲೆಯಲ್ಲಿ ಕುಳಿತನು. ಮಹಾತ್ಮರೆ ತಾವು ದೊಡ್ಡವರಂತೆ ಕಾಣುತ್ತೀರಿ ಶಿವಲಿಂಗದ ಮೇಲೆ ಕಾಲು ಇಟ್ಟುಕೊಂಡು ಕೂಡುವದು ಅಪರಾಧವಲ್ಲವೇ. ನಿಮ್ಮ ಕೃತ್ಯ ಸರಿಯೇ? ಅಯ್ಯೊ! ನನ್ನನ್ನ ಕಾಲುಗಳು ಲಿಂಗದ ಮೇಲೆ ಇದ್ದವೇ? ನಾನು ಮುದುಕನಾದ ಕಾರಣ ನನ್ನ ಯಾವ ಅಂಗಾಂಗಳ ನನ್ನ ನಿಯಂತ್ರಣದಲ್ಲಿ ಇಲ್ಲ. ತಾವು ದಯವಿಟ್ಟು ನನ್ನ ಕಾಲುಗಳನ್ನು ತೆಗೆದು ಬೇರೆ ಸ್ಥಳದಲ್ಲಿ ಇಡುವ ಉಪಕಾರ ಮಾಡಿರಿ ಎಂದರು. ಅದರಂತೆ ನಾಮದೇವರು ಲಿಂಗದ ಮೇಲಿದ್ದ ಕಾಲುಗಳನ್ನು ತೆಗೆದು ಬೇರೆ ಕಡೆಗೆ ಇಟ್ಟರು. ಆ ಇಟ್ಟ ಜಾಗದಲ್ಲಿ ಲಿಂಗ ಉದ್ದವಾಯಿತು. ನಾಮದೇವ ಗಾಬರಿಯಾಗಿ ಮತೊಂದು ಕಡೆಗೆ ಎತ್ತಿ ಇಟ್ಟನು. ಅಲ್ಲಿ ಲಿಂಗ ಉದ್ದವಾಯಿತು. ತನ್ನ ಕಾಲು ಮೇಲೆ ಇಟ್ಟುಕೊಂಡನು. ಅಲ್ಲಿ ಲಿಂಗ ಉದ್ದವಾಯಿತು. ಕೊನೆಗೆ ಆ ಕಾಲುಗಳು ತನ್ನ ತೆಲೆ ಮೇಲೆ ಇಟ್ಟುಕೊಂಡನು ಇಡೀ ದೇಹ ಲಿಂಗಮಯವಾಯಿತು ನಾಮದೇವರಿಗೆ ಸತ್ಯದ ಅರಿವಾಯಿತು.
ನಾಮದೇವ ಮನೆಗೆ ಬಂದು ಬಹಳ ದಿನ ಉರಳಿದವು ನಾಮದೇವ ವಿಠೋಬನನ್ನು ಭೇಟಿಯಾಗಲು ಬರದಿದ್ದಕ್ಕೆ ಸ್ವತಃ ವಿಠೋಬನೆ ನಾಮದೇವನ ಮನೆಗೆ ಬಂದನು. ನೀನು ನನ್ನ ದೇವಾಲಯಕ್ಕೆ ಬಂದಿಲ್ಲ ಎಂದಾಗ ನಿನ್ನ ದೇವಾಲಯಕ್ಕೆ ಯಾಕೇ ಬರಬೇಕು. ನೀನೇ ಎಲ್ಲಾ ಕಡೆಗೆ ಇರುವಾಗ ಆ ದೇವಾಲಯದ ಆಗತ್ಯವಿಲ್ಲ. ವಿಠೋಬನು ಮನಸ್ಸಿನಲ್ಲಿ ನಕ್ಕರು.
(ಸಂಗ್ರಹ ಬರಹ)


