ಉಡುಪಿ: ಕಾರವಾರದ ಮಯೂರವರ್ಮ ಬೀಚ್ ನಲ್ಲಿ ಜರುಗಿದ ರಾಷ್ಟ್ರೀಯ ಕರಾಟೆ ವಿಭಾಗದಲ್ಲಿ ಭಾಗವಹಿಸಿ 14 ವರ್ಷ ಬಾಲಕರ ವಿಭಾಗದ ಫೈಟಿಂಗ್ ನಲ್ಲಿ ಎಲ್ಲೂರಿನ ವಿನೀತ್ ಕುಲಾಲ್ ಕಂಚಿನ ಪದಕ ಗಳಿಸಿದ್ದಾರೆ. ಅವರ ಸಹೋದರ ವಿಶಾಲ್ ಕುಲಾಲ್ 16 ವರ್ಷ ವಿಭಾಗದ ಫೈಟಿಂಗ್ ನಲ್ಲಿ 1 ಚಿನ್ನದ ಪದಕ, ಕಟಾ ವಿಭಾಗದಲ್ಲಿ 1 ಚಿನ್ನದ ಪದಕ ಗಳಿಸಿದ್ದಾರೆ. ಇವರಿಬ್ಬರೂ ಎಲ್ಲೂರು ಯುವಕ ಮಂಡಲದ ಕರಾಟೆ ತರಗತಿಯ ವಿದ್ಯಾರ್ಥಿಗಳು. ಇರಂದಾಡಿ ಸುಗಂಧಿ ಕುಲಾಲ್ ಮತ್ತು ಸುರೇಂದ್ರ ಕುಲಾಲ್ ದಂಪತಿಯ ಸುಪುತ್ರರಾದ ಇವರಿಗೆ ಸತೀಶ್ ಪೂಜಾರಿ ಬೆಳ್ಮಣ್ಣು ಕರಾಟೆ ತರಬೇತಿ ನೀಡುತ್ತಿದ್ದಾರೆ.
ರಾಷ್ಟ್ರೀಯ ಕರಾಟೆ ಸ್ಪರ್ಧೆ : ಸಹೋದರರಿಗೆ ಚಿನ್ನದ ಪದಕ
Students corner
1 Min Read


