ಉಡುಪಿ(ಫೆ.೨೮): ಕುಲಾಲ ಸಮಾಜದ ಮುಖಂಡ, ನಾಲ್ಕು ದಶಕಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿಕೊಂಡು ಬಂದಿದ್ದ ಮಲ್ಪೆ ಬಸಂತ್ ಸ್ಪುಡಿಯೋ ಮಾಲಕ ಶ್ರೀ ಬಿ. ಕೃಷ್ಣ ಅವರು ನಿಧನರಾಗಿದ್ದಾರೆ.
ಮೂಲತಃ ಕುಂದಾಪುರದವರಾದ ಬಿ.ಕೃಷ್ಣ ಅವರು ನಾಲ್ಕು ದಶಕಗಳ ಹಿಂದೆ ಮಲ್ಪೆಯಲ್ಲಿ ಸ್ಟುಡಿಯೋ ಆರಂಭಿಸಿದ್ದರು. ಕಪ್ಪು ಬಿಳುಪು ಚಿತ್ರಗಳ ಕಾಲದಲ್ಲಿ ಅಪಾರ ಸಾಧನೆ ಮಾಡಿರುವ ಇವರ ಗರಡಿಯಲ್ಲಿ ಪಳಗಿದ ಅನೇಕ ಯುವ ಛಾಯಾಗ್ರಹಕರು ಇಂದು ಸ್ವತಂತ್ರವಾಗಿ ವೃತ್ತಿ ಜೀವನ ನಡೆಸಿ ಯಶಸ್ಸು ಸಾಧಿಸಿದ್ದಾರೆ. ಬಿಸೀದ ಬಲೆ, ಕೋಟಿ ಚೆನ್ನಯ್ಯ ಮುಂತಾದ ಚಲನಚಿತ್ರಗಳಲ್ಲಿಯ ಛಾಯಾಗ್ರಹಣ ನಡೆಸಿದ ಕೃಷ್ಣ ಅವರ ಸಾಧನೆ ಅಮೋಘ. ಮಲ್ಪೆಯಲ್ಲಿ ಜರಗಿದ ಅನೇಕ ದುರಂತಗಳನ್ನು ಕ್ಯಾಮರದಲ್ಲಿ ಸೆರೆ ಹಿಡಿಯುವುದರ ಜೊತೆಗೆ ಮಾನವೀಯವಾಗಿ ನಡೆದುಕೊಳ್ಳುವ ಇವರು ಮಲ್ಪೆ ಕೃಷ್ಣಣ್ಣ ಇಂದೇ ಖ್ಯಾತಿ ಹೊಂದಿದ್ದರು.
ಪೆರ್ಡೂರು ಕುಲಾಲ ಸಂಘದ ಕುಲಾಲ ಸಮುದಾಯ ಭವನದ ಕಟ್ಟಡ ಸಮಿತಿಯ ಗೌರವ ಅಧ್ಯಕ್ಷ ರಾಗಿ ಸಮುದಾಯ ಭವನ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೃಷ್ಣ ಅವರು ದಕ್ಷಿಣ ಕನ್ನಡ ಪೋಟೋಗ್ರಾಫರ್ಸ್ ಅಸೋಸಿಯೇಶನ್ ನ `ಛಾಯಾಸ್ಪೂರ್ತಿ’ ಪ್ರಶಸ್ತಿಗೆ ಭಾಜನರಾಗಿದ್ದರು.
ಖ್ಯಾತ ಛಾಯಾಗ್ರಾಹಕ, ಕುಲಾಲ ಮುಖಂಡ ಮಲ್ಪೆ ಬಿ. ಕೃಷ್ಣ ನಿಧನ
Kulal news
1 Min Read