ಮಂಗಳೂರು(ಫೆ.೧೯): ಕುಲಾಲ/ಕುಂಬಾರ ಸಮಾಜದ ನೂತನ ಮಾಸಿಕ ಪತ್ರಿಕೆ `ಸರ್ವಜ್ಞವಾಣಿ’ ಇದರ ಪ್ರಾಯೋಗಿಕ ಸಂಚಿಕೆಯು ಫೆ.೨೦ರಂದು ಬಿಡುಗಡೆಗೊಳ್ಳಲಿದೆ. ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ/ ಕರಾವಳಿ ಕುಲಾಲ,ಕುಂಬಾರರ ಯುವವೇದಿಕೆ ಇದರ ಸಹಯೋಗದಲ್ಲಿ ಜರಗುವ ದ.ಕ. ಜಿಲ್ಲಾಮಟ್ಟದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮೊದಲ ಪ್ರಾಯೋಗಿಕ ಸಂಚಿಕೆಯು ಗಣ್ಯರ ಸಮ್ಮುಖದಲ್ಲಿ ಅನಾವರಣಗೊಳ್ಳಲಿದೆ ಎಂದು ಪತ್ರಿಕೆಯ ಸಂಪಾದಕ ಪದ್ಮನಾಭ ಕುಲಾಲ್ ವೇಣೂರು ತಿಳಿಸಿದ್ದಾರೆ.
ಕುಲಾಲ-ಕುಂಬಾರ ಸಮುದಾಯದ ಧ್ವನಿಯಾಗಿ ನಿಲ್ಲಲಿರುವ ಪತ್ರಿಕೆಯ ಗೌರವ ಸಂಪಾದಕರಾಗಿ ಸಾಮಾಜಿಕ ಹಾಗೂ ಜನಪರ ಚಿಂತನೆ,ಹೋರಾಟಗಳಿಂದ ಚಿರಪರಿಚಿತವಾಗಿರವ ವೈದ್ಯ, ಪ್ರಾಧ್ಯಾಪಕ, ಸಾಹಿತಿ ಹಾಗೂ ಉತ್ತಮ ಸಂಘಟಕರಾಗಿರುವ, ರಾಜ್ಯ ಕುಂಬಾರರ ಮಹಾ ಸಂಘದ ಕಾರ್ಯಾಧ್ಯಕ್ಷರಾಗಿರುವ ಪ್ರೊ| ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ಸೋಮಯ್ಯ ಮೂಲ್ಯ ಹನೈನಡೆ, ನಿವೃತ್ತ ಪ್ರಬಂಧಕರು ವಿಜಯ ಬ್ಯಾಂಕ್, ಹರೀಶ್ ಕಾರಿಂಜ ಸಿವಿಲ್ ಇಂಜಿನಿಯರ್ ಬೆಳ್ತಂಗಡಿ, ಮೂಡಬಿದಿರೆ ಎಸ್ಕೆಎಫ್ ಕಂಪೆನಿಯಲ್ಲಿ ಎಚ್ಆರ್ ಮೆನೇಜರ್ ಆಗಿರುವ ಮೋಹನ್ ಬಿ. ಕುಲಾಲ್ ವೇಣೂರು, ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಅಶ್ವಿತ್ ಕುಲಾಲ್, ಕುಂಭಶ್ರೀ ವೇಣೂರು, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿರುವ ಬಿ.ಎಸ್. ಕುಲಾಲ್, ಬೆಳ್ತಂಗಡಿ ಇವರು ಕಾರ್ಯನಿರ್ವಹಿಸಲಿದ್ದಾರೆ. ಉಪ ಸಂಪಾದಕರಾಗಿ ಉಡುಪಿ ಜಿಲ್ಲಾ ಕರಾವಳಿ ಕುಲಾಲ ಯುವ ವೇದಿಕೆಯ ಜಿಲ್ಲಾಧ್ಯಕ್ಷರಾದ ಸತೀಶ್ ಕುಲಾಲ್ ನಡೂರು, ಉಮೇಶ್ ನಡ್ತಿಕಲ್ಲು, ಪ್ರಸರಣದ ವಿಭಾಗದ ಮುಖ್ಯಸ್ಥರಾಗಿ ಕೊರಗಪ್ಪ ಎಂ. ಕುಲಾಲ್, ವೇಣೂರು, ಬಂಟ್ವಾಳ ತಾಲೂಕು ವರದಿಗಾರರಾಗಿ ಸಂದೀಪ್ ಸಾಲ್ಯಾನ್, ಬಂಟ್ವಾಳ ಅವರು ಕಾರ್ಯನಿರ್ವಹಿಸಲಿದ್ದಾರೆ.
ಫೆ. 20ರಂದು `ಸರ್ವಜ್ಞವಾಣಿ’ ನೂತನ ಮಾಸಿಕದ ಪ್ರಾಯೋಗಿಕ ಸಂಚಿಕೆ ಬಿಡುಗಡೆ
Kulal news
1 Min Read