ಬಂಟ್ವಾಳ : ಉಡುಪಿಯ ಅಜ್ಜರಕಾಡು ಡಾ. ಜಿ. ಶಂಕರ್ ಸರಕಾರೀ ಮಹಿಳಾ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕುಮಾರಿ ಸಖಿತಾ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಇವರು ಪುಂಜಾಲಕಟ್ಟೆ ಸರಕಾರಿ ಪ್ರಥಮದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಪ್ರೊ. ಆಂಟನಿ ಟಿ.ಪಿ ಅವರ ಮಾರ್ಗದರ್ಶನವನ್ನು ಪಡೆದಿರುತ್ತಾರೆ. ಸಖಿತಾ ಅವರು ಪುಂಜಾಲಕಟ್ಟೆ ಹಟ್ಟತ್ತೋಡಿ ರಮಾನಾಥ ಮೂಲ್ಯ ಹಾಗೂ ಚಂದ್ರಾವತಿ ದಂಪತಿಯ ಸುಪುತ್ರಿಯಾಗಿದ್ದಾರೆ.


