ಬೆಳ್ತಂಗಡಿ: ಕುಲಾಲ/ಕುಂಬಾರರ ಯುವವೇದಿಕೆ ವಲಯ ಕ್ರೀಡಾ ಸಮಿತಿ ಮಚ್ಚಿನ ಇವರ ಆಶ್ರಯದಲ್ಲಿ ತಾಲೂಕು ಮಟ್ಟದ ಕುಲಾಲ/ಕುಂಬಾರರ ಕ್ರೀಡಾಕೂಟ `ಸರ್ವಜ್ಞ ಟ್ರೋಫಿ-೨೦೧೭’ ಯು ಇತ್ತೀಚೆಗೆ ಮಚ್ಚಿನ ಶಾಲೆಯ ಕ್ರೀಡಾಂಗಣದಲ್ಲಿ ಜರುಗಿತು.
ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಹರ್ಷಲತಾ ದೀಪ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಉಪಾಧ್ಯಕ್ಷೆ ವೇದಾವತಿ ನಾವೂರು, ಮಚ್ಚಿನ ಶಾಲೆಯ ಮುಖ್ಯ ಶಿಕ್ಷಕ ವಿಠಲ್ ಬಿ, ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಪದ್ಮನಾಭ ಕಾರಂದೂರು, ಮಚ್ಚಿನ ಕುಲಾಲ ಸಂಘದ ಅಧ್ಯಕ್ಷ ರಮೇಶ್ ಮೂಲ್ಯ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಮೊದಲಾದವರು ಭಾಗವಹಿಸಿದ್ದರು.
ಸಮಾರೋಪ : ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಸ್ಥಾಪಕ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ತಾಪ೦ ಸದಸ್ಯೆ ವಸಂತಿ ಲಕ್ಷ್ಮಣ್, ನ್ಯಾಯವಾದಿ ಸ್ವಾತಿ ಬಂಗೇರ, ನ್ಯೂ ಫ್ರೆಂಡ್ಸ್ ಕೊಡ್ಯೇಲು ಇದರ ಅಧ್ಯಕ್ಷ ಸತೀಶ್, ರಿಕ್ಷಾ ಮಾಲಕ/ಚಾಲಕರ ಸಂಘದ ಅಧ್ಯಕ್ಷ ಉಮೇಶ್ ಕುಲಾಲ್, ಕೃಷ್ಣಪ್ಪ ಮೂಲ್ಯ, ಸಿನಿಮಾ ನಟ ಕಾರ್ತಿಕ್ ಅತ್ತಾವರ ಮುಂತಾದ ಗಣ್ಯರು ಭಾಗವಹಿಸಿದ್ದರು.
ಸನ್ಮಾನ : ವೇದಿಕೆಯಲ್ಲಿ ನಾಟಿ ವೈದ್ಯ ರಾಧಾಕೃಷ್ಣ ಬೈಲೊರ್ದು, ಪ್ರಸೂತಿ ತಜ್ಞೆ ಕೆಂಚು ಮೂಲ್ಯೆದಿ, ಮಾಜಿ ಸೈನಿಕರಾದ ಸತೀಶ್ ಕೊಡ್ಯೇಲು, ಉಮೇಶ್ ಕುಲಾಲ್, ಬೀಡಿ ಕಂಟ್ರಾಕ್ಟರ್ ಕುಂಜಪ್ಪ ಮೂಲ್ಯ ಮೊದಲಾದವರನ್ನು ಸನ್ಮಾನಿಸಲಾಯಿತು. ಕ್ರೀಡಾ ಸಮಿತಿ ಅಧ್ಯಕ್ಷ ವಸಂತ ಮಡೆಕ್ಕಿಲ, ಉಪಾಧ್ಯಕ್ಷ ದಿನೇಶ್, ಕಾರ್ಯದರ್ಶಿ ಸಚಿನ್, ಮಿಥುನ್ ಕುಲಾಲ್, ದಿನೇಶ್ ಪಾಂಗಳ ಇತರ ಪದಾಧಿಕಾರಿಗಳಾದ ರಾಜೇಶ್, ರಮೇಶ್ ಮೂಲ್ಯ ಭೋಜ ಮೂಲ್ಯ, ದೇವಪ್ಪ ಮೂಲ್ಯ, ಉಮೇಶ್ ಬಂಗೇರ, ಕೇಶವತಿ, ಹರೀಶ್ ಬಳ್ಳಮಂಜ, ಸಂತೋಷ್ ಸಿದ್ಧಕಟ್ಟೆ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.