ಪುಣೆ : ಕಲೆ ಎಂಬುದು ಕುಂಬಾರರಿಗೆ ಳಿದು ಬಂದ ವರ. ಮಣ್ಣಿನೊಂದಿಗೆ ಬೆರೆತು ಮಣ್ಣಿನ ಮಕ್ಕಳಾಗಿ ಬಾಳಿ ಬದುಕಿದ ಕುಲಾಲ ಸಮಾಜವಿಂದು ತುಳಿತಕ್ಕೊಳಗಾಗಿದೆ. ಇಂಥ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವ ಸಲುವಾಗಿ ನಮಗಿಂದು ಸಂಘಟನೆಯ ಬಲ ಅತ್ಯಗತ್ಯವಾಗಿದೆ ಎಂದು ಚಿತ್ರ ನಿರ್ದೇಶಕ, ನಿರ್ಮಾಪಕ ಎನ್ನಾರ್ ಕೆ ವಿಶ್ವನಾಥ್ ಹೇಳಿದರು.
ಶ್ಯಾಮ್ ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್ ಸಭಾಭವನದಲ್ಲಿ ಇತ್ತೀಚಿಗೆ ನಡೆದ ಕುಲಾಲ ಸುಧಾರಕ ಸಂಘ ಪುಣೆ ಇದರ 38ನೇ ವಾರ್ಷಿಕ ಸ್ನೇಹ ಸಮ್ಮಿಲನ, ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪುಣೆ ಕುಲಾಲ ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕರಾವಳಿ ಕುಲಾಲ/ಕುಂಬಾರ ಯುವ ವೇದಿಕೆಯ ಬಂಟ್ವಾಳ ವಲಯಾಧ್ಯಕ್ಷ ನಾರಾಯಣ ಪೆರ್ನೆ, ಸಂಘದ ಉಪಾಧ್ಯಕ್ಷ ದೊಡ್ಡಣ್ಣ ಮೂಲ್ಯ, ನವೀನ್ ಬಂಟ್ವಾಳ, ಮನೋಜ್ ಸಾಲ್ಯಾನ್, ವಾಸುದೇವ ಬಂಟ್ವಾಳ, ರಮೇಶ್ ಕೊಡ್ಮನ್ಕರ್, ಕುಟ್ಟಿ ಮೂಲ್ಯ, ಹರೀಶ್ ಮೂಲ್ಯ, ಸುಜಾತ ಮೂಲ್ಯ, ಜಯಂತಿ ಮೂಲ್ಯ ಮುಂತಾದವರು ಉಪಸ್ಥಿತರಿದ್ದರು.