ಪೆರ್ಡೂರು (ಫೆ.೧೧) : ಐದು ವರುಷದ ಹಿಂದೆ ಹೊಸ ಆಸೆ, ಕನಸು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೆರ್ಡೂರು ದೂಪದಕಟ್ಟೆ ನಿವಾಸಿ ಸುಕೇಶ ಮತ್ತು ಪ್ರತಿಮಾರದ್ದು ಸುಂದರ ಸಂಸಾರ. ತಂದೆಯಾಗುವ ಸಂಭ್ರಮದಲ್ಲಿದ್ದ ಸುಕೇಶ್ ದಂಪತಿಗಳಿಗೆ ಆಘಾತದಂತೆ ಎರಗಿದ್ದು, ಸತತ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಮೊದಲ ಮಗುವಿನ ಗರ್ಭಪಾತ, 2ನೇ ಬಾರಿ 4 ತಿಂಗಳಲ್ಲೇ ಮತ್ತೊಮ್ಮೆ ಗರ್ಭಪಾತ, 3ನೇ ಬಾರಿಯೂ 6 ತಿಂಗಳಿಗೆ ಮಗದೊಮ್ಮೆ ಗರ್ಭಪಾತ.
ಸತತ ಅಘಾತದಿಂದ ಕಂಗೆಟ್ಟು ಬೇಸರ,ನಿರಾಸೆಯಲ್ಲಿ ಇದ್ದ ದಂಪತಿಗಳು ಈ ಬಾರಿ ಬಲು ಜಾಗ್ರತೆಯಿಂದ ಕೆಎಂಸಿ ಮಣಿಪಾಲದಲ್ಲಿ ಬಾಣಂತಿ ಚಿಕಿತ್ಸೆ ಪಡೆಯುತ್ತಿದ್ದರು. ‘ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು’ ಎಂಬಂತೆ 4ನೇ ಬಾರಿಯೂ 7ನೇ ತಿಂಗಳಿಗೆ ಅನಿವಾರ್ಯವಾಗಿ ಡೆಲಿವರಿ ಮಾಡಿಸಬೇಕಾದ ಪ್ರಮೇಯದಿಂದ ಶಸ್ತ್ರಚಿಕಿತ್ಸೆಯಿಂದ ಹೆಣ್ಣು ಮಗುವಿನ ಜನನವಾಯಿತು .
ಗಾಯದ ಮೇಲೆ ಬರೆ ಎಳೆದಂತೆ ಬೆಳವಣಿಗೆಯ ಕೊರತೆಯಿಂದ 800Gm ತೂಕದ ಮಗುವನ್ನುಆಸ್ಪತ್ರೆಯ ICU ನಲ್ಲಿ ಇಟ್ಟು ಆರೈಕೆ ಮಾಡಬೇಕು. ಅದೆಷ್ಟು ಖರ್ಚಾದರೂ ಕೂಡ ಮಗುವನ್ನು ಉಳಿಸಿ ಕೊಡುವಂತೆ ದಂಪತಿಗಳು ವೈದ್ಯರಲ್ಲಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ICUನಲ್ಲಿ ಮಗುವಿನ ಬೆಳವಣಿಗೆಗಾಗಿ ಮುಂದಿನ 7ತಿಂಗಳವರೆಗೆ ಅಂದಾಜು 3 ಲಕ್ಷ ರೂಪಾಯಿ ಖರ್ಚು ಆಗಬಹುದು ಎಂದು ವ್ಯೆದ್ಯರು ಹೇಳಿದ್ದಾರೆ. ಪುಟ್ಟ ಕಂದನ ಕಿಲಕಿಲ ನಗುವನು ಕಾಣಲು ವೈದ್ಯರು, ಕುಟುಂಬಿಕರು, ಸ್ನೇಹಿತರು ಸಕಲ ಪ್ರಯತ್ನ ಮಾಡುತ್ತಿದ್ದಾರೆ.
ಉಡುಪಿಯಲ್ಲಿ ಚಾಲಕ ವೃಟ್ಟಿಯಲ್ಲಿರುವ ಸುಕೇಶ್ ,ತನ್ನ ಎಲ್ಲ ಶಕ್ತಿಯನ್ನು ವ್ಯಯಿಸಿ, ಸಾಲಸೋಲ ಮಾಡಿ ಮಗುವಿನ ಉಳಿಕೆಗೆ ಈಗಾಗಲೇ ಸಾಕಷ್ಟು ಪ್ರಯತ್ನವನ್ನು ಮಾಡಿದ್ದಾರೆ. ಇನ್ನೂ ಮಗುವಿನ ಚಿಕಿತ್ಸೆಗೆ ಮೂರು ಲಕ್ಷ ರೂಪಾಯಿಯನ್ನು ಹೊಂದಿಸಲು ಹೆಣಗಾಡುತ್ತಿದ್ದಾರೆ. ಬೆಳವಣಿಗೆ ಕೊರತೆಯಿಂದ ಬಳಲುತ್ತಿರುವ ನವಜಾತ ಹೆಣ್ಣು ಮಗುವನ್ನು ಉಳಿಸಲು ದಾನಿಗಳ ನೆರವು ಬಯಸಿದ್ದಾರೆ.
ಸಹಾಯ ಮಾಡಲಿಚ್ಛಿಸುವ ದಾನಿಗಳು ಕೆಳಗಿನ ಸುಕೇಶ್ ಇವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.
Sukesh
Corporation Bank
Udupi Branch
A/c no:520101000147350
IFSC:CORP0000001
ಸಂಪರ್ಕ:- 9900767469
For Paytm: 9902332354
(ಬರಹ : ಯೋಗೀಶ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಕುಲಾಲ ಸಂಘ ಪೆರ್ಡೂರು)