ಮುಂಬಯಿ : ಸಾಧಿಸುವ ಇಚ್ಚೆಯಿದ್ದವರಿಗೆ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯರಾಗುವ ಅವಶ್ಯಕತೆಯಿದೆ. ಇದರಿಂದ ಉನ್ನತ ಸ್ಥಾನಕ್ಕೇರಲು ಸಾಧ್ಯ. ಮಾತ್ರವಲ್ಲದೇ ಉತ್ತಮ ಉದ್ಯೋಗಾವಕಾಶಗಳೂ ಸೇರಿದಂತೆ ಉನ್ನತ ವಿದ್ಯಾಭ್ಯಾಸಕ್ಕೂ ಕ್ರೀಡೆಯಲ್ಲಿ ಸಾಧನೆಗೈದವರಿಗೆ ಸ್ಥಾನವನ್ನು ಕಲ್ಪಿಸಲಾಗುತ್ತದೆ ಎಂದು ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಹೇಳಿದರು.
ಕುಲಾಲ ಸಂಘ ಮುಂಬಯಿ ಇದರ ಮೀರಾ ರೋಡ್-ವಿರಾರ್ ಸ್ಥಳೀಯ ಸಮಿತಿ ವತಿಯಿಂದ ಇತ್ತೀಚೆಗೆ ಭಾಯಂದರ್ ಈಸ್ಟ್ ನ ಬಾಳಾ ಸಾಹೇಬ್ ಠಾಕ್ರೆ ಸಾಹೇಬ್ ಮೈದಾನದಲ್ಲಿ
ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳನ್ನೊಳಗೊಂಡ `ಕುಲಾಲ ಸ್ಪೋರ್ಟ್ಸ್ ಲೀಗ್- 2017′ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಳಮಟ್ಟದ ಸದಸ್ಯರ ಸಹಕಾರ ಅಗತ್ಯವಿದೆ. ನಮ್ಮಲ್ಲಿ ಅನೇಕ ಯುವ ಪ್ರತಿಭೆಗಳು ಎಲೆಮರೆ ಕಾಯಿಯಂತಿದ್ದು ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ. ಅಂಥ ಕೆಲಸವನ್ನು ಕುಲಾಲ ಸಂಘದ ವಿವಿಧ ಕಾರ್ಯಕ್ರಮಗಳು ಮಾಡಲು ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
ಕೃಷ್ಣ ಭಟ್ ಕುಮಟಾ, ಕುಲಾಲ ಸಂಘ ಮೀರಾ ರೋಡ್ ಭಾಯಂದರ್ ವಲಯದ ಕಾರ್ಯಾಧ್ಯಕ್ಷ ಸುಂದರ ಮೂಲ್ಯ, ಮೀರಾ ರೋಡ್-ವಿರಾರ್ ಸ್ಥಳೀಯ ಸಮಿತಿಯ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಉಮೇಶ್ ಬಂಗೇರ, ಚರ್ಚ್ ಗೇಟ್-ದಹಿಸರ್ ಸಮಿತಿಯ ಕಾರ್ಯಾಧ್ಯಕ್ಷ ರಘು ಮೂಲ್ಯ, ಶಂಕರ್ ವೀರ್ಕರ್, ರವಿಕಾಂತ ಶೆಟ್ಟಿ, ದೇವದಾಸ್ ಕುಲಾಲ್, ಡಿ ಐ ಮೂಲ್ಯ, ಜಯ ಎಸ್ ಅಂಚನ್ , ಮಮತಾ ಗುಜರನ್, ಮಾಲತಿ ಅಂಚನ್, ಆನಂದ ಜಿ ಮೂಲ್ಯ, ಶೇಕರ ಮೂಲ್ಯ, ವಿಶ್ವನಾಥ ಮೂಲ್ಯ, ಕೇಶವ ಮೂಲ್ಯ, ಚಂದು ಮೂಲ್ಯ ಮೋಹನ್ ಬಂಜನ್, ಯೋಗೀಶ್ ಬಂಗೇರ, ಸುರೇಖಾ ಬಂಗೇರ, ಉದಯ ಮೂಲ್ಯ, ವಾಮನ ಮೂಲ್ಯ, ರಘುನಾಥ್ ಕರ್ಕೇರ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.







