ಬೆಳ್ತಂಗಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಮೂಲ್ಯರ ಯಾನೆ ಕುಲಾಲರ ಸಂಘ ಶಿರ್ಲಾಲು ಅಳದಂಗಡಿ ಇವರ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕುಲಾಲ ಬಾಂಧವರ ಕ್ರಿಕೆಟ್ ಪಂದ್ಯಾಟದಲ್ಲಿ ಓಂ ಸಾಯಿ ಬ್ರದರ್ಸ್ ಅಳದಂಗಡಿ ತಂಡ ಕುಲಾಲ ಟ್ರೋಫಿ ಗೆದ್ದುಕೊಂಡಿದೆ.
ಇತ್ತೀಚೆಗೆ ನಡೆದ ಸಾಧಕರಿಗೆ ಸನ್ಮಾನ, ನೂತನ ನಿವೇಶನ ಖರೀದಿ, ಕುಲಾಲ ಟ್ರೋಫಿ ಇದರ ಉದ್ಘಾಟನೆಯನ್ನು ಸತ್ಯದೇವತೆ ಆಡಳಿತ ಮುಖ್ಯಸ್ಥರಾದ ಶಿವ ಪ್ರಸಾದ್ ಅಜಿಲ ನೆರೆವೇರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ ನೂಜಿಗೆ ವಹಿಸಿದರು ಮುಖ್ಯ ಅತಿಥಿಗಳಾಗಿ ಗೋಪಾಲ ಮೂಲ್ಯ, ಶಿಕ್ಷಕರಾದ ನಾಗಭೂಷಣ್ ಸತೀಶ್, ಸಂಘದ ಅಧ್ಯಕ್ಷರಾದ ಪ್ರಭಾಕರ ಕುಲಾಲ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಮಾಧವ ಕುಲಾಲ್, ರಾಜೇಶ್ ಕುಲಾಲ್ ಬೈರೊಟ್ಟು ಸುರೇಶ್ ಕುಲಾಲ್ ಪೈಂಟರ್, ಕಾರ್ಯದರ್ಶಿಯಾದ ಗಣೇಶ್ ಕೆದ್ದು ಉಪಸ್ಥಿತರಿದ್ದರು. ಕ್ರೀಡಾಕೂಟದ ಸ್ವಾಗತವನ್ನು ಮನೋಹರ ಕುಲಾಲ್, ಧನ್ಯವಾದವನ್ನು ಗಣೇಶ್ ನೆರೆವೇರಿಸಿದರು.


