`ಕುಲಾಲ್ ವರ್ಲ್ಡ್’ ಪ್ರಮುಖರಿಂದ ಚೆಕ್ ಹಸ್ತಾ೦ತರ
ಮಂಗಳೂರು(ಜ.೧೫): ಮಾರಣಾಂತಿಕ ಮೆದುಳು ಸಂಬಂಧಿ ಕಾಯಿಲೆಗೆ ತುತ್ತಾಗಿರುವ ಕಿನ್ನಿಗೋಳಿ ಗುತ್ತಗಾಡು ನಿವಾಸಿ ದಾಮೋದರ ಮೂಲ್ಯ ಅವರ ಚಿಕಿತ್ಸೆಗೆ ಮಂಗಳೂರು ಅಸೋಸಿಯೇಶನ್ ಅಫ್ ಸೌದಿ ಅರೇಬಿಯಾ(MASA) ಅವರು ನೀಡಿದ 30,000 ರೂ. ಚೆಕ್ಕನ್ನು `ಕುಲಾಲ್ ವರ್ಲ್ಡ್’ ವಾಟ್ಸಪ್ ಬಳಗದ ಪ್ರಮುಖರು ನಿನ್ನೆ ಹಸ್ತಾ೦ತರಿಸಿದರು.
ಮೂವರು ಹೆಣ್ಣು ಮಕ್ಕಳನ್ನು ಹೊಂದಿರುವ ಬಡವರಾದ ದಾಮೋದರ ಅವರು ತಮ್ಮ ಕಾಯಿಲೆಯ ಚಿಕಿತ್ಸೆಗೆ ಹಣಕಾಸಿನ ತೊಂದರೆ ಎದುರಿಸುತ್ತಿರುವ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಈ ಹಿಂದೆ ವರದಿ ಪ್ರಕಟಿಸಿತ್ತು.
ಇದನ್ನು ಕಂಡ `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ಸದಸ್ಯ ಮುಖೇಶ್ ಕುಲಾಲ್ ಸ್ವತಃ ಸಹಾಯ ಮಾಡಿದ್ದಲ್ಲದೆ, ತಮ್ಮ ಒಡನಾಟದ ಮಂಗಳೂರು ಅಸೋಸಿಯೇಶನ್ ಅಫ್ ಸೌದಿ ಅರೇಬಿಯಾ(MASA) ಸದಸ್ಯರ ಗಮನಕ್ಕೆ ತಂದು ಸಹಾಯ ಮಾಡುವಂತೆ ವಿನಂತಿಸಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಸಂಘಟನೆಯ ಪ್ರಮುಖರಾದ ಶ್ರೀ ಬಾಬು ತಲ್ಲೂರು, ಶ್ರೀಮತಿ ಹೇಮಾ ಶೆಟ್ಟಿ ಮತ್ತು ಶ್ರೀ ಸತೀಶ್ ಕುಲಾಲ್ ಪೊಳಲಿ ಅವರು 30,000 ರೂ. ಚೆಕ್ ಕಳಿಸಿಕೊಟ್ಟಿದ್ದರು.
ಪ್ರಸ್ತುತ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾಮೋದರ ಮೂಲ್ಯ ಅವರನ್ನು ಭೇಟಿ ಮಾಡಿದ `ಕುಲಾಲ್ ವರ್ಲ್ಡ್’ ಬಳಗದ ಪ್ರಮುಖರಾದ ದಿನೇಶ್ ಬಂಗೇರ ಇರ್ವತ್ತೂರು, ಹೇಮಂತ್ ಕುಲಾಲ್ ಕಿನ್ನಿಗೋಳಿ, ನರೇಶ್ ಕುಲಾಲ್ ಬೆಳ್ತಂಗಡಿ, ರಂಜಿತ್ ಕುಮಾರ್ ಮೂಡುಬಿದರೆ, ಉದಯ್ ಕುಲಾಲ್ ಕಳತ್ತೂರು, ಅರುಣ್ ಕುಲಾಲ್ ಮೂಳೂರು, ರಮೇಶ್ ಕುಲಾಲ್ ವಗ್ಗ ಅವರು ಚೆಕ್ಕನ್ನು ಹಸ್ತಾ೦ತರಿಸಿ ಯೋಗ ಕ್ಷೇಮ ವಿಚಾರಿಸಿದರು. `ಕುಲಾಲ್ ವರ್ಲ್ಡ್’ ಮಾಡಿದ ಮನವಿಗೆ ಸ್ಪಂದಿಸಿ ಹಲವರು ದಾನಿಗಳು ಈ ಹಿಂದೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿ ಹಣ ಸಹಾಯ ನೀಡಿದ್ದರು.