ಮಂಗಳೂರು(ಜ.೧೫): ಕುಲಾಲ್ ವಲ್ಡ್ ಡಾಟ್ ಕಾಂ ವೆಬ್ ಸೈಟಿನ ವ್ಯವಸ್ಥಾಪಕ ಸಂಪಾದಕ ದಿನೇಶ್ ಬಂಗೇರ ಇರ್ವತ್ತೂರು ಅವರನ್ನು `ಕುಲಾಲ್ ವರ್ಲ್ಡ್ ‘ವಾಟ್ಸಪ್ ಬಳಗದ ವತಿಯಿಂದ ಸಂಭ್ರಮದಿಂದ ಜ.೧೪ರಂದು ಮಂಗಳೂರಿನಲ್ಲಿ ಸನ್ಮಾನಿಸಲಾಯಿತು.
ಕುಲಾಲ್ ವಲ್ಡ್ ನ ಪ್ರಮುಖರಾದ ಹೇಮಂತ್ ಕುಲಾಲ್ ಕಿನ್ನಿಗೋಳಿ, ನರೇಶ್ ಕುಲಾಲ್ ಬೆಳ್ತಂಗಡಿ, ರಂಜಿತ್ ಕುಮಾರ್ ಮೂಡುಬಿದರೆ, ಸದಸ್ಯರಾದ ಉದಯ್ ಕುಲಾಲ್ ಕಳತ್ತೂರು, ಅರುಣ್ ಕುಲಾಲ್ ಮೂಳೂರು, ರಮೇಶ್ ಕುಲಾಲ್ ವಗ್ಗ ಈ ಸಂಧರ್ಭ ಉಪಸ್ಥಿತರಿದ್ದರು. ದಿನೇಶ್ ಅವರ ಪತ್ರಿಕೋದ್ಯಮ ಕೆಲಸಗಳನ್ನು ಈ ಸಂಧರ್ಭ ಗೌರವದಿಂದ ನೆನಪಿಸಿಕೊಂಡು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕುಲಾಲ್ ವಲ್ಡ್ ಕಟ್ಟಿ ಬೆಳಸಿದ ಈ ಹಿರಿಯ ಸಾಧಕರ ಅಗಾಧ ವ್ಯಕ್ತಿತ್ವದ ಸಣ್ಣ ಪರಿಚಯ
ದಿನೇಶ್ ಇರ್ವತ್ತೂರು ಎಂಬ ಹೆಸರು ಕುಲಾಲ ಸಮುದಾಯದ ಸಮಸ್ತರಿಗೂ ಚಿರಪರಿಚಿತ. ಕುಲಾಲ್ ವಲ್ಡ್ ಡಾಟ್ ಕಾಮ್ ಎಂಬ ಸಾಮಾಜಿಕ ಅಂತರ್ಜಾಲ ತಾಣದ ಮೂಲಕ ಜಗತ್ತಿನ ಸಮಸ್ತ ಕುಲಾಲ ಸಮುದಾಯದ ಸುದ್ದಿ ಮಾಹಿತಿಗಳ ಮಾಹಾಹೂರಣವನ್ನು ಸಮಾಜಕ್ಕೆ ಉಣಬಡಿಸಿದವರು.ಎಂತೆಂತಹ ಪ್ರಬಲ ಸಂಘಟಿತ ಜಾತಿಯ ಯಾವ ವೆಬ್ ಸೈಟ್ ಮಾಧ್ಯಮವೂ ಮಾಡಲಾರದ ಅತ್ಯಂತ ಕ್ಷಿಪ್ರ/ಸ್ಷಷ್ಟ ಮಾಹಿತಿಗಳ ಹೂರಣವನ್ನು ನಿಮಿಷದಲ್ಲಿ ಒದಗಿಸಿದ ಕೀರ್ತಿ ಕುಲಾಲ್ ವಲ್ಡ್ ವೆಬ್ ನದ್ದು. ಇದರ ಹಿಂದಿರುವ ಕ್ರಿಯಾಶೀಲ ವ್ಯಕ್ತಿ ದಿನೇಶ್ ಅವರು.
ಕುಲಾಲ/ಕುಂಬಾರ ಸಮುದಾಯದ ಆಗುಹೋಗುಗಳ ಸುದ್ದಿಯನ್ನಷ್ಟೇ ಅಲ್ಲದೆ, ಸಮಾಜದ ಬಡವರ, ಅಸಹಾಯಕರ ಕುರಿತ ವರದಿಯನ್ನು ಮತ್ತು ಸಹಾಯಹಸ್ತ ನೀಡುವಲ್ಲಿಯೂ ಕುಲಾಲ್ ವರ್ಲ್ಡ್ ಬಳಗ ಮುಂಚೂಣಿಯಲ್ಲಿದೆ. ಈ ಎಲ್ಲದರ ಹಿಂದೆ ದಿನೇಶ್ ಅವರ ಶ್ರಮ ಜನ ಮೆಚ್ಚುವಂಥದ್ದು.
ತಮಗೆ ಅನಿಸಿದನ್ನು ಯಾರ ಮುಲಾಜಿಗೂ ಒಳಗಾಗದೆ ನೇರವಾಗಿ, ನಿರ್ದಿಷ್ಟವಾಗಿ ಹೇಳಬಲ್ಲ ಅಪರೂಪದ ನೇರ ಪತ್ರಿಕೋದ್ಯಮಿ. ದೂರದ ಗಲ್ಫ್ ನಲ್ಲಿ ಕುಳಿತು ಕನ್ನಡ ಪತ್ರಿಕೋದ್ಯಮದ ಕೈಂಕರ್ಯ ಮಾಡುತ್ತಾ ಸಮುದಾಯದ ಅಭಿವೃದ್ಧಿಯಲ್ಲಿ ತಮ್ಮದು ದೊಡ್ಡ ಪಾಲಿದೆ ಎಂದು ತೋರಿಸಿದವರು. ಕರಾವಳಿಯ ಸಮಸ್ತ ಕುಲಾಲ ಅಭಿಮಾನಿಗಳ ಪರವಾಗಿ ಪತ್ರಕರ್ತ ದಿನೇಶ್ ಬಂಗೇರ ಇರ್ವತ್ತೂರು ಅವರಿಗೆ ಹೃದಯ ತುಂಬಿದ ಅಭಿನಂದನೆ. ಅವರ ಪತ್ರಿಕೋದ್ಯಮದ ಕೆಲಸ ನಿತ್ಯವೂ ನೂತನವಾಗಿ ಸಾಗಲಿ. ಅವರ ಕೈಯಲ್ಲಿ ಲೇಖನಿ ಸದಾ ಛಳಪಿಸಲಿ. ಅವರಿಗೆ ಅಭಿನಂದನೆಗಳ ನಮನ.
ಬರಹ : ಉದಯ ಕುಲಾಲ್ ಕಳತ್ತೂರು