ಮಂಗಳೂರು(ಜ.೧೩): ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವು ಜೀರ್ ಕುಡುಪು ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಶ್ರೀದೇವಿ ದೇವಸ್ಥಾನದ ಬಳಿಯಿರುವ ನಾಸಿಕ್ ಬಿ ಎಚ್ ಬಂಗೇರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಲಾಲ ಸಮುದಾಯದ ನಾಯಕರುಗಳಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ,ತೇಜಸ್ವೀರಾಜ್ ,ಭಾರತಿ ಶೇಷಪ್ಪ , ಕಸ್ತೂರಿ ಪಂಜ , ಗಣೇಶ್ ಎಂ ಸುರತ್ಕಲ್ , ಮೋಹಿತ್ ಏನ್ ಕದ್ರಿ , ಪ್ರಶಾಂತ್ ಕುಲಾಲ್ ಮಂಗಳೂರು ,ಶ್ರೀನಿವಾಸ್ ಕುಲಾಲ್ ಚಾರ್ಮಾಡಿ ,ಮಹಾಬಲ ಮಾಸ್ಟರ್ , ಪ್ರಸಾದ್ ಸಿದ್ದಕಟ್ಟೆ ಮುಂತಾದವರು ಭಾಗವಹಿಸಿದ್ದರು.
ಶಿಕ್ಷಣ ,ಕರಾಟೆ ,ನೃತ್ಯ ,ಸಂಗೀತ ,ಕ್ರೀಡೆ ,ಸಮಾಜ ಸೇವೆ ,ನಾಟಕ ರಂಗ ಹಾಗು ರಾಜಕೀಯ ಸೇವೆ ಗಳಲ್ಲಿ ಗುರುತಿಸಲ್ಪಟ್ಟ ಕುಮಾರಿ ಸಾನ್ವಿ ,ಕುಮಾರಿ ದೃತಿ ,ಕುಮಾರಿ ಧನ್ವಿತಾ ,ಕುಮಾರಿ ರಶ್ಮಿ ಕುಲಾಲ್ ,ಶ್ರೀಮತಿ ಮಮತಾ ಎ ಕುಲಾಲ್ ,ಶ್ರೀಮತಿ ಚಂಚಲಾಕ್ಷಿ ಯಸ್ ಕುಲಾಲ್ , ರವೀಂದ್ರ ಮುನ್ನಿ ಪಾಡಿ , ದೇಜಪ್ಪ ಕುಲಾಲ್ , ಭಾಸ್ಕರ ಕುಲಾಲ್ ಬರ್ಕೆ ,ಶ್ರೀಮತಿ ಕಸ್ತೂರಿ ಪಂಜ ರವರನ್ನ ಸನ್ಮಾನಿಸಲಾಯಿತು.
ಇದೇ ವೇಳೆ ಹಿರಿಯ ನಾಗರಿಕರಿಗೆ ಗುರುತು ಪತ್ರ ಹಾಗು ಕೆಎಂಸಿ ಆರೋಗ್ಯ ಚೀಟಿ ಗಳನ್ನ ಕೆಎಂಸಿ ಯ ಇನ್ಸೂರೆನ್ಸ್ ವಿಭಾಗದ ಶ್ರೀಪತಿ ಯವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು. ಜಯರಾಮ್ ಕೆವಿ ವಂದಿಸಿದರು. ಪ್ರವೀಣ್ ಮೂಡುಶೆಡ್ಡೆ ಕಾರ್ಯಕ್ರಮ ನಿರೂಪಿಸಿದರು