ಮಂಗಳೂರು(ಡಿ.೧೨): ಬೆಂಗಳೂರಿನ ವಿದ್ಯಾನಗರದಲ್ಲಿ ನಡೆದ ರಾಜ್ಯಮಟ್ಟದ ಹಿರಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕುಲಾಲ ಸಮುದಾಯದ ಮೂವರು ಕ್ರೀಡಾಳುಗಳು ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಗಿರಿಧರ್ ಸಾಲ್ಯಾನ್ ಗೆ 2 ಕಂಚು
ಸರಕಾರಿ ಐಟಿಐ, ಕದ್ರಿಹಿಲ್ಸ್ ಇದರ ಪ್ರಾಂಶುಪಾಲ ಗಿರಿಧರ್ ಸಾಲ್ಯಾನ್ ಅವರು ಶಾಟ್ಪುಟ್ ಹಾಗೂ ಜಾವೆಲಿನ್ ತ್ರೋ ವಿಭಾಗದಲ್ಲಿ ಎರಡು ಕಂಚಿನ ಪದಕ ಪಡೆದು ೨೦೧೭,ಫೆಬ್ರವರಿಯಲ್ಲಿ ಹೈದರಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಡಾ. ಮಮತಾ ಅಣ್ಣಯ್ಯ ಕುಲಾಲ್ ಗೆ 1ಚಿನ್ನ ಸಹಿತ ಮೂರು ಪದಕ
ವೈದ್ಯೆ, ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಉಪಾಧ್ಯಕ್ಷೆ ಮಮತಾ ಅಣ್ಣಯ್ಯ ಕುಲಾಲ್ ಅವರು ದೇವನಹಳ್ಳಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಟ್ರಿಪಲ್ ಜಂಪ್ ನಲ್ಲಿ ಚಿನ್ನದ ಪದಕ, ೨೦೦ ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ ಉದ್ದ ಜಿಗಿತದಲ್ಲಿ ಕಂಚಿನ ಪದಕ ಪಡೆದು ೨೦೧೭ರ ಫೆಬ್ರವರಿಯಲ್ಲಿ ಹೈದರಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಚಂಚಲಾಕ್ಷಿ ಕುಲಾಲ್ ಗೆ 2 ಪದಕ
ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಸದಸ್ಯೆ, ಕೋಡಿಕಲ್ ನಲ್ಲಿ ನರ್ಸರಿ ಶಾಲೆ ನಡೆಸುತ್ತಿರುವ ಚಂಚಲಾಕ್ಷಿ ಸುಕುಮಾರ್ ಕುಲಾಲ್ ಅವರು ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಮತ್ತು ಡಿಸ್ಕಸ್ ಎಸೆತದಲ್ಲಿ ಕಂಚಿನ ಪದಕ ಪಡೆದು, ೨೦೧೭ರ ಫೆಬ್ರವರಿಯಲ್ಲಿ ಹೈದರಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.